Site icon Ullalavani

ಕೋಟೆಕಾರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 178 ಸೋಂಕಿತರು !

UN networks
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 178  ಸೋಂಕಿತರಿದ್ದಾರೆ.  ಇವರಲ್ಲಿ  78 ಮಂದಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿಗಳಾಗಿದ್ದಾರೆ. ಬೀರಿ  ಕೆ2 ಕನ್ ಸ್ಟ್ರಕ್ಷನ್ ಅಡಿ ಕಾರ್ಯ ನಿರ್ವಹಿಸುವ  14 ಮಂದಿ ಕಾರ್ಮಿಕರಿಗೆ ಪಾಸಿಟಿವ್  ಆಗಿದೆ. ಎಲ್ಲರನ್ನೂ ಐಸೊಲೇಷನ್ ನಲ್ಲಿಡಲಾಗಿದೆ‌‌ ಎಂದು ಕಿರಿಯ ಆರೋಗ್ಯ ನಿರೀಕ್ಷಕ‌ ವಿಕ್ರಮ್ ತಿಳಿಸಿದ್ದಾರೆ.

ಕೋಟೆಕಾರು ಪಟ್ಟಣ ಪಂಚಾಯಿತಿನಲ್ಲಿ  ಅಧಿಕಾರಿಗಳ ಜೊತೆಗೆ ಸೋಮವಾರ ನಡೆದ ಕೋವಿಡ್ ನಿಗ್ರಹ ಕುರಿತ ಪರಿಶೀಲನಾ ಸಭೆಯಲ್ಲಿ ತಿಳಿಸಲಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ 15 ದಿನಗಳಿಗೆ ಸಭೆ ಸೇರಿದಲ್ಲಿ ಟಾಸ್ಕ್ ಫೋಸ್೯ ಆಗುವುದಿಲ್ಲ,  ಎರಡು ದಿನಗಳಿಗೊಮ್ಮೆ  ಫೀಲ್ಡಿಗೆ ಹೋಗಲೇಬೇಕು.ಬೀಟ್ ಪೊಲೀಸ್ ಕಡ್ಡಾಯವಾಗಿ ಬರಲೇಬೇಕು ಎಂದು ಹೇಳಿದರು.

ಟಾಸ್ಕ್ ಫೋಸ್೯ ಇಷ್ಟೇ ಜನರು ಬೇಕೆಂಬ ವಿಚಾರವಿಲ್ಲ. ತುರ್ತು ಸ್ಥಿತಿ ಸಂದರ್ಭದಲ್ಲಿ ಇರುವಷ್ಟು ಜನರನ್ನು ತಂಡವಾಗಿ ರಚಿಸಿ ಜನರಿಗೆ ನೆರವಾಗಿ. ಸದ್ಯ ಇರುವ ಸಿಬ್ಬಂದಿಯಲ್ಲಿ  ಒಬ್ಬರಿಗೆ ನಾಲ್ಕು ವಾಡ್೯ ವಿಂಗಡಿಸಿ ಕಾರ್ಯಾಚರಿಸಿ.ಕೋವಿಡ್ ಪಿಡುಗು ಮೂರು ವರ್ಷಗಳ ಕಾಲ ಮುಂದುವರಿಯುವ ಲಕ್ಷಣಗಳಿದ್ದು, ಲಸಿಕೆ ಮಾತ್ರ ಶಾಶ್ವತ ಮದ್ದಾಗಿರುತ್ತದೆ. ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವ ಮೂಲಕ ಜಾಗೃತಿಯನ್ನು ಮುಂದುವರಿಸಿರಿ.ನಿತ್ಯ ಬೆಳಿಗ್ಗೆ ಎಷ್ಟು ಪಾಸಿಟಿವ್ ಕೇಸುಗಳಿರುವ ಕುರಿತು ವಾರ್ಡಿನವರಿಗೆ ಮಾಹಿತಿ ಕೊಡಬೇಕು.ಒಬ್ಬನಿಗೆ ಆಗಿರುವುದನ್ನು ಬೇರೆಯವರಿಗೆ ಹರಡದಂತೆ  ನೋಡಿಕೊಳ್ಳಿರಿ. ಟಾಸ್ಕ್ ಫೋಸ್ ೯ ಮೊದಲ ಆದ್ಯತೆ ರೋಗ ಹರಡದಂತೆ ನೋಡಿಕೊಳ್ಳಿರಿ. ಸಂಪರ್ಕ ಬೆಳೆಸುವುದೇ ಉದ್ದೇಶ, ಮನವೊಲಿಸಲು ಮಾಡಬೇಕಾದ ಕಾರ್ಯ ಎಂದರು.

ಮುಖ್ಯಾಧಿಕಾರಿ ಪ್ರಭಾಕರ್ ಪಾಟೀಲ್, 

ಕಿರಿಯ ಅಭಿಯಂತರ ದಿನೇಶ್, ಕಿರಿಯ ಆರೋಗ್ಯ ನಿರೀಕ್ಷಕ‌  ವಿಕ್ರಮ್, ಕಂದಾಯ ನಿರೀಕ್ಷಕ ರವಿ ಕೊಂಡಾಣ,ತಾಲೂಕು ಆರೋಗ್ಯ ಅಧಿಕಾರಿ ಸುಜಯ್ ಭಂಡಾರಿ, ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಪ್ರಫುಲ್ಲಾದಾಸ್, ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ   ಡಾ.ಗೋಪಿ ಪ್ರಕಾಶ್ , ಉಪಾಧ್ಯಕ್ಷೆ  ಭಾರತಿ ರಾಘವ್ ಗಟ್ಟಿ ಉಪಸ್ಥಿತರಿದ್ದರು.

‌ಆಶಾ ಕಾರ್ಯಕರ್ತೆಯರಿಗೆ 

ಸುರಕ್ಷತೆ ಕಿಟ್ ಗಳೇ ಇಲ್ಲ ! 

ಕೋಟೆಕಾರು ಪ.ಪಂ ವ್ಯಾಪ್ತಿಗೆ ಬರುವ ಹತ್ತು ಮಂದಿ ಆಶಾ ಕಾರ್ಯಕರ್ತೆಯರಿಗೆ ಸುರಕ್ಷಾ  ಕಿಟ್ ಗಳನ್ನೇ ವಿತರಿಸಿಲ್ಲ. ಕನಿಷ್ಟ ಸ್ಯಾನಿಟೈಸರ್ ಆಗಲಿ  ಮಾಸ್ಕ್ ಆಗಲಿ ಈವರೆಗೆ ನೀಡಿಲ್ಲ ಎಂದು ಆಶಾ ಕಾರ್ಯಕರ್ತೆಯರು ಸಭೆಯಲ್ಲಿ ದೂರಿಕೊಂಡರು. ಪ್ರತಿಕ್ರಿಯಿಸಿದ ಶಾಸಕರು ಮನೆಗಳಿಗೆ ತೆರಳುವ ಆಶಾ ಕಾರ್ಯಕರ್ತೆಯರಿಗೆ ಕಡ್ಡಾಯವಾಗಿ ಸುರಕ್ಷಾ ಕಿಟ್ ಗಳನ್ನು ನೀಡಲೇಬೇಕು ಎಂದು ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು. ಅಲ್ಲದೆ ಮಾಚ್೯ ನಂತರ ವೇತನ ಸಿಗದ ಇರುವ ಕುರಿತು ತಿಳಿಸಿದರು.

Exit mobile version