UN networks
ಉಳ್ಳಾಲ: ವಾರಾಂತ್ಯದ ಕಫ್ರ್ಯೂ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಕಮೀಷನರ್ ಆದೇಶದಂತೆ ಒಳರಸ್ತೆಗಳಲ್ಲಿ ಓಡುವ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಉಳ್ಳಾಲದ ಅಲೇಕಳ ಮಂಚಿಲದಲ್ಲಿ ಉಳ್ಳಾಲ ಎಸ್.ಐ ಪ್ರದೀಪ್ ನೇತೃತ್ವದಲ್ಲಿ ಪೊಲೀಸ್ ರೈಡ್ ಹೊಡೆದಾಗ ತ್ರಿಬಲ್ ರೈಡ್ ಹೊಡೆಯುತ್ತಿದ್ದ ಬೈಕ್ ಸವಾರರು ಸೇರಿದಂತೆ ಮಗುವನ್ನು ಎತ್ತಿಕೊಂಡು ಕುಟುಂಬವೊಂದು ಎದ್ದೂಬಿದ್ದು ಓಡಿದ ವೀಡಿಯೋ ವೈರಲ್ ಆಗಿದೆ.
ಉಳ್ಳಾಲದ ಎಸ್.ಐ ಪ್ರದೀಪ್ ಜೀಪ್ ಬರುತ್ತಿದ್ದಂತೆ ಬೈಕಿನಲ್ಲಿದ್ದ ಇಬ್ಬರು ಹಾರಿ ಪರಾರಿಯಾದರೆ, ಬೈಕ್ ಸವಾರನನ್ನು ಪೊಲೀಸರು ಹಿಡಿದು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ರಸ್ತೆ ಬದಿಯಲ್ಲಿ ಮಕ್ಕಳನ್ನು ಎತ್ತಿಕೊಂಡು ಸುತ್ತಾಡುತ್ತಿದ್ದ ಕುಟುಂಬವೊಂದು ಮನೆಯೊಳಗೆ ಓಡೋಡಿ ಪೊಲೀಸರ ಕಣ್ಣು ತಪ್ಪಿಸಿದ್ದಾರೆ. ಈ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.
