ಗ್ರಾಮಚಾವಡಿ: ಪಜೀರು ಮರ್ಸಿಯಮ್ಮನವರ ಹಳೇ ಇಗರ್ಜಿ ಕಟ್ಟಡಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಹೊಸ ಇಗರ್ಜಿಯ ಕಟ್ಟಡ ಗ್ರಾಮಚಾವಡಿ ಜಂಕ್ಷನ್ನಿಗೆ ಹತ್ತಿರವಾಗಿದ್ದು, ಪಜೀರು ಪ್ರದೇಶದಲ್ಲಿರುವ ಹಳೇ ಚರ್ಚ್‍ನಲ್ಲಿಯೂ ಪೂಜಾ ವಿಧಾನಗಳು ನಡೆಯುತಿತ್ತು. ಹಳೇಯ ಚರ್ಚ್ ಕಟ್ಟಡ ಗೋಪುರದ ಹೆಂಚುಗಳು ಹಾಗೂ ಶೀಟ್ ಗೆ ಹಾನಿಯಾಗಿದೆ. ಘಟನೆ ವೇಳೆ ಚರ್ಚ್ ಕಟ್ಟಡದಲ್ಲಿ ಯಾರೂ ಇರದಿರುವುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಪಜೀರು ಗ್ರಾ.ಪಂ ಸದಸ್ಯರು ಭೇಟಿ ನೀಡಿ ಹಾನಿ ವರದಿ ಸಂಗ್ರಹಿಸಿದ್ದಾರೆ.