Site icon Ullalavani

ತೊಕ್ಕೊಟ್ಟು: ಸಾಯಿಪರಿವಾರ್ ನಿಂದ ಎರಡು ಕುಟುಂಬಗಳಿಗೆ ಕಿಟ್ ವಿತರಣೆ

ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಶಕ್ತರಿಗೆ ಅನ್ನದಾನಕ್ಕೆ ಸಹಕರಿಸಿದರು.
ಪಿಲಾರು ದಾರಂದಬಾಗಿಲು ಮತ್ತು ಕುಂಪಲ ಬಗಂಬಿಲದ ಎರಡು ಅಶಕ್ತ ಕುಟುಂಬಗಳಿಗೆ ತಿಂಗಳ ದಿನಬಳಕೆಯ ದಿನಸಿ ಕಿಟ್ ವಿತರಿಸಲಾಯಿತು.

ಉಳ್ಳಾಲ: ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ನ ಮೂಲಕ ಪಿಲಾರು ದಾರಂದಬಾಗಿಲು ಮತ್ತು ಕುಂಪಲ ಬಗಂಬಿಲದ ಎರಡು ಅಶಕ್ತ ಕುಟುಂಬಗಳಿಗೆ ತಿಂಗಳ ದಿನಬಳಕೆಯ ದಿನಸಿ ಕಿಟ್ ವಿತರಿಸಲಾಯಿತು.
ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಶಕ್ತರಿಗೆ ಅನ್ನದಾನಕ್ಕೆ ಸಹಕರಿಸಿದರು. ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಸ್ಥಾಪಕರೂ ರಾಜ್ ಕೇಟರರ್ಸ್ ನ ಮಾಲಕ ರಾಜೇಶ್ ಕಾಪಿಕಾಡ್ ಎರಡು ಕುಟುಂಬಗಳ ಕಿಟ್ ಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂತೋಷ್ ಬೊಳಿಯಾರ್, ಪ್ರಮುಖರಾದ ಪ್ರಶಾಂತ್ ಕೊಲ್ಯ, ರವಿಶಂಕರ್ ಸೋಮೇಶ್ವರ, ಗಣೇಶ್ , ರೂಪೇಶ್,ಸುಜೀತ್ ಕಂಬ್ಳ ಪದವು, ನವೀನ್ ಶೆಟ್ಟಿ ಕುರ್ನಾಡು,ಮಾಜಿ ಗ್ರಾ.ಪಂ ಸದಸ್ಯ ಪ್ರೇಮಾನಂದ ಪಿಲಾರು, ಬಗಂಬಿಲ ಶಿವಶಕ್ತಿ ಮಿತ್ರ ಮಂಡಳಿಯ ಪ್ರವೀಣ ಐ ಬಗಂಬಿಲ, ಸದಸ್ಯರು,ಸಾಯಿ ಪರಿವಾರ್ ಟ್ರಸ್ಟ್ ನ ಪ್ರಮುಖರಾದ ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಸೂರ್ಯ ಕುಂಪಲ, ದೀಕ್ಷಿತ್ ಪೂಜಾರಿ, ಅರುಣ್, ಕಿಶೋರ್ ಡಿ.ಕೆ. , ಸತೀಶ್ ಚೆಂಬುಗುಡ್ಡೆ, ಶಮಿತ್ ಧರ್ಮನಗರ, ಜಿತೇಶ್ ಪಿಲಾರು, ಸವಿತ್ ಉಚ್ಚಿಲ್, ರಾಜೇಶ್ ಮಡಿವಾಳ, ಅಭಿಷೇಕ್,
ಹಿತೇಶ್ ಉಳ್ಳಾಲ ಬೈಲ್ ಮೊದಲಾದವರು ಉಪಸ್ಥಿತರಿದ್ದರು.

Exit mobile version