Site icon Ullalavani

ಮುಡಿಪು ರಿಕ್ಷಾ ಢಿಕ್ಕಿ : ಪಾದಚಾರಿ ಮೃತ್ಯು

ಕೊಣಾಜೆ: ರಸ್ತೆ ದಾಟುತ್ತಿದ್ದ‌ ಸಂದರ್ಭದಲ್ಲಿ ‌ರಿಕ್ಷಾ ವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಸೋಮವಾರದಂದು ಮುಡಿಪುವಿನಲ್ಲಿ ನಡೆದಿದೆ.
ಹೂಹಾಕುವ ಕಲ್ಲು ಸಮೀಪದ ಚಂದ್ರಶೇಖರ್ (೫೮) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಚಂದ್ರಶೇಖರ್‌ ಅವರು ಕೆಲಸ ಮುಗಿಸಿ ಸಂಜೆ 7 ಗಂಟೆಗೆ ಮುಡಿಪು ಜಂಕ್ಷನ್‌‌‌‌‌ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಮುಡಿಪು ಕಡೆಯಿಂದ ಬಾಳೆಪುಣಿ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ್‌ ತಲೆ ಹಿಂಬದಿಗೆ ತೀವ್ರವಾದ ಗಾಯಗಳಾಗಿದ್ದವು.
ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Exit mobile version