Site icon Ullalavani

ಉಳ್ಳಾಲ ಸಮುದಾಯ ಆಸ್ಪತ್ರೆ ತುರ್ತು ಸ್ಥಿತಿಯಲ್ಲಿ ಯೆನೆಪೋಯ ಆಸ್ಪತ್ರೆ ಜೊತೆಗೆ ಕೋವಿಡ್ ಕೇರ್ ನಿರ್ವಹಣೆ : ಶಾಸಕ ಯು.ಟಿ ಖಾದರ್

ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ವೀಕ್ಷಣೆಯನ್ನು ಯು.ಟಿ ಖಾದರ್ ಮಂಗಳವಾರ ನಡೆಸಿದರು.

ಉಳ್ಳಾಲ : ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರವನ್ನು ತುರ್ತು ಸ್ಥಿತಿಯಲ್ಲಿ 50 ಆಕ್ಸಿಜನ್ ಬೆಡ್ ಗಳೊಂದಿಗೆ ಸಿದ್ಧ ಪಡಿಸಲಾಗಿದೆ. ಜಿಲ್ಲಾಡಳಿತ ಯೇನೆಪೋಯ ವೈದ್ಯಕೀಯ ಆಸ್ಪತ್ರೆಯೊಂದಿಗೆ ಕೋವಿಡ್ ಕೇರ್ ನಿರ್ವಹಣೆ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ. ಇದರೊಂದಿಗೆ ಆಕ್ಸಿಜನ್ ನಿರ್ವಹಣೆ ( ಕನ್ಸರ್‍ವೇಟರ್)ಘಟಕವನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಸ್ಥಾಪಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿ ರೂ.30 ಲಕ್ಷ ರೂ ಬಿಡುಗಡೆಗೊಳಿಸಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆ ಆರಂಬಿಸುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆಕ್ಸಿಜನ್ ಬೆಡ್ ಗಳ ಸಿದ್ಧತೆಯ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಯೆನೆಪೆÇೀಯ ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೊರೊನ ಸೋಂಕಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಸರ್ವ ಸಿದ್ದತೆಯನ್ನು ನಡೆಸುತ್ತಿದೆ. ಈಗಾಗಲೇ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಸೋಂಕಿತರ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಬೇಕಾದ ಆಕ್ಸಿಜನ್ ಬೆಡ್ ಗಳು ಖಾಲಿಯಿದೆ. ಬೆಂಗಳೂರು ಮತ್ತು ದೆಹಲಿ ಮಾದರಿಯಲ್ಲಿ ಮಂಗಳೂರಿನಲ್ಲಿ ಕೋವಿಡ್ ವಿಷಮ ಸ್ಥಿತಿಗೆ ಬಂದ ಸಂದರ್ಭದಲ್ಲಿ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ಬೇಕಾದ ಸಿದ್ದತೆಗಳನ್ನು ಈಗಾಗಲೇ ಆರಂಭಿಸಿದೆ. ಜಿಲ್ಲಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಮತ್ತು ಯೇನೆಪೆÇಯ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದೆ. ಯೇನೆಪೆÇಯ ಆಸ್ಪತ್ರೆಯ ಮುಖ್ಯಸ್ಥರು ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ವಹಣೆಗೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ಬೇಕಾದ ವ್ಯವಸ್ಥೆಯನ್ಬು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಕೈಗೊಳ್ಳಲಿದೆ ಎಂದ ಅವರು ಸೆಂಟರ್‍ಗೆ ಬೇಕಾದ ವೈದ್ಯರು, ದಾದಿಯರು, ಕಾರ್ಮಿಕರನ್ನು ಯೆನೆಪೆÇೀಯ ಸಂಸ್ಥೆ ನೀಡಲಿದೆ ಎಂದರು.
ಪ್ರತ್ಯೇಕ ಸೌಲಭ್ಯ : ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಮುಖದ್ವಾರವಿದ್ದು ಇದನ್ನು ಎರಡು ವಿಭಾಗಗಳಾಗಿ ವಿಭಾಗಿಸಿ ಆಕ್ಸಿಜನ್ ಕೋವಿಡ್ ಕೇರ್ ಸೆಂಟರನ್ನು ಪ್ರತ್ಯೇಕಿಸಲಾಗುವುದು. ಈಗಾಗಲೇ ಹೆರಿಗೆ ಸೇರಿದಂತೆ ವಿವಿಧ ರೋಗಗಳಿಗೆ ರೋಗಿಗಳು ಆಗಮಿಸುತ್ತಿದ್ದಾರೆ. ದಿನಕ್ಕೆ 150-200 ರೋಗಿಗಳು ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದಾರೆ. ಇವರಿಗೆ ತೊಂದರೆಯಾಗದ ರೀತಿಯಲ್ಲಿ ಆಸ್ಪತ್ರೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಕೋವಿಡ್ ಕೇರ್ ಅನ್ನು ಜನರಲ್ ವೈದ್ಯಕೀಯ ಚಿಕಿತ್ಸೆಯಿಂದ ಪ್ರತ್ಯೇಕಿಸಲಾಗುವುದು . ಇದರಿಂದ ದೈನಂದಿನ ಆಗಮಿಸುವ ರೋಗಿಗಳಿಗೆ ಆಕ್ಸಿಜನ್ ಕೋವಿಡ್ ಕೇರ್ ಆಸ್ಪತ್ರೆಯಿಂದ ತೊಂದರೆಯಾಗುವುದಿಲ್ಲ ಎಂದರು.
ರೋಗ ಲಕ್ಷಣ ಇದ್ದಾಗಲೇ ಚಿಕಿತ್ಸೆ ಪಡೆದುಕೊಳ್ಳಿ : ಕೋವಿಡ್ ಸೋಂಕಿತರು ರೋಗ ಲಕ್ಷಣ ಇದ್ದಾಗಲೇ ಚಿಕಿತ್ಸೆ ಪಡೆದುಕೊಳ್ಳಿ ಉಸಿರಾಟದ ತೊಂದರೆ ಹೆಚ್ಚಾದ ಬಳಿಕ ಆಸ್ಪತ್ರೆಗೆ ತೆರಳಿದರೆ ದೇವರಿಂದಲೂ ರಕ್ಷಣೆ ಸಾಧ್ಯವಿಲ್ಲ ಎಂದ ಅವರು ಸಾಮಾಜಿಕ ಅಂತರ ಸೇರಿದಂತೆ ಮುಂಹಾಗರೂಕತ ಕ್ರಮವನ್ಬು ತೆಗೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಯೇನೆಪೆÇಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಖ್ಯಸ್ಥ ಯೇನೆಪೆÇಯ ಫರ್ಹಾದ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್,
ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಉಳ್ಳಾಲ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಪ್ರಶಾಂತ್ ಅಮೀನ್,
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯ್ಯುಬ್ ಮಂಚಿಲ, ಪೌರಾಯುಕ್ತ ರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Exit mobile version