Site icon Ullalavani

ಕೊರೊನಾ ಲಾಕ್‍ಡೌನ್ ಅಶಕ್ತರಿಗೆ ಶ್ರೀ ಸಾಯಿ ಪರಿವಾರ್ ತೊಕ್ಕೊಟ್ಟು ವತಿಯಿಂದ ಊಟದ ವ್ಯವಸ್ಥೆ

UN networks

ಉಳ್ಳಾಲ:  ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಪರಿಸರದ ಅಶಕ್ತರು, ವಲಸೆ ಕಾರ್ಮಿಕರು  ಹಾಗೂ ಭಿಕ್ಷುಕರಿಗೆ   ಶ್ರೀ ಸಾಯಿ  ಪರಿವಾರ್ ವತಿಯಿಂದ ಮಧ್ಯಾಹ್ನದ ಊಟ ವಿತರಿಸಲಾಯಿತು.
ಶೃಂಗಾರ್ ಕ್ಯಾಟರರ್ಸ್  ಮಾಲೀಕ ಶ್ರೀನಿವಾಸ್ ಕಾಪಿಕಾಡ್ ಇವರ ಸಹಕಾರದೊಂದಿಗೆ ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್ ಇವರು ಭಾನುವಾರದ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿ ವಿತರಿಸಿದರು.


ಈ ಸಂದರ್ಭ ಸಾಯಿ ಪರಿವಾರ್‍ನ  ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್ ಕುಂಪಲ,  ದೀಕ್ಷಿತ್ ಪೂಜಾರಿ ತೊಕ್ಕೊಟ್ಟು, ಸತೀಶ್ ಭಟ್ನಗರ, ಸೂರ್ಯ ಕುಂಪಲ, ಶವಿತ್ ಉಚ್ಚಿಲ್, ಹಿತೇಶ್ ಉಳ್ಳಾಲಬೈಲ್,  ಅರುಣ್ ಪೂಜಾರಿ , ಗಣೇಶ್ ಪಂಡಿತ್ ಉಪಸ್ಥಿತರಿದ್ದರು.
ಕಳೆದ ಬಾರಿಯ ಲಾಕ್ ಡೌನಿನಲ್ಲೂ ಶ್ರೀ ಸಾಯಿ ಪರಿವಾರ್ ವತಿಯಿಂದ 35 ದಿನಗಳ ಕಾಲ ಅನ್ನದಾನ ನೆರವೇರಿಸಲಾಗಿತ್ತು.

Exit mobile version