Site icon Ullalavani

ಪತಿ‌ ಮೃತಪಟ್ಟ ಎರಡು ಗಂಟೆ ಅವಧಿಯಲ್ಲಿ ಪತ್ನಿಯ ಸಾವು

UN networks

ಉಳ್ಳಾಲ: ಪತಿ‌ ಮೃತಪಟ್ಟ ಎರಡು ಗಂಟೆಗಳ ಅವಧಿಯಲ್ಲಿ ಪತ್ನಿಯೂ ಕೊನೆಯುಸಿರೆಳೆದ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.


ಕಾಂಗ್ರೆಸ್ ಮುಖಂಡ ನಝೀರ್ ಅಹ್ಮದ್(62) ಮತ್ತು ಅವರ ಪತ್ನಿ ಜಮೀಲಾ(54) ಮೃತಪಟ್ಟ ದಂಪತಿಯಾಗಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ನಝೀರ್ ಅಹ್ಮದ್ ಅವರಿಗೆ ಬುಧವಾರ ತಡರಾತ್ರಿ ತೀವ್ರ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಕಾರಣದಿಂದ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ದಾರಿಮಧ್ಯೆ 12:30ರ ಕೊನೆಯುಸಿರೆಳೆದರು. ಮೃತದೇಹವನ್ನು ಮನೆಗೆ ತರಲಾಗಿದ್ದು, ಅಂತಿಮ ದರ್ಶನ ಪಡೆದ ನಝೀರ್ ಅಹ್ಮದ್ ಅವರ ಪತ್ನಿ ಜಮೀಲಾ ಅವರು ಪತಿಯ ಅಗಲುವಿಕೆಯಿಂದ ಖಿನ್ನರಾಗಿದ್ದು ಸುಮಾರು 2:30ರ ಸುಮಾರಿಗೆ ಹೃದಯಾಘಾತದಿಂದ ಅವರೂ ಕೊನೆಯುಸಿರೆಳೆದಿದ್ದಾರೆ.
ಮುಸ್ಲಿಂ ಲೀಗ್ ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಝೀರ್ ಅಹ್ಮದ್ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಎರಡು ಬಾರಿ ನಗರ ಪಂಚಾಯಿತಿಗೆ ಸ್ಪರ್ಧಿಸಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಜಂಟಿ ಕಾರ್ಯದರ್ಶಿಯಾಗಿ, 15 ವರ್ಷಗಳ ಕಾಲ ಮೇಲಂಗಡಿ ಉರ್ದು ಶಾಲೆಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಉಳ್ಳಾಲ ನಗರ ಸಭೆಯ ಕುಡಿಯುವ ನೀರಿನ ಗುತ್ತಿಗೆದಾರರಾಗಿದ್ದರು.
ಮೃತರ ದಫನ ಕಾರ್ಯ ಗುರುವಾರ ಉಳ್ಳಾಲ ದರ್ಗಾ ವಠಾರದ ‘ಮಯ್ಯತ್ ಗಾರ್’ ನಲ್ಲಿ ನೆರವೇರಿತು.

Exit mobile version