Site icon Ullalavani

ತೊಕ್ಕೊಟ್ಟು: ತೀಯ ಸೇವಾ ಸಹಕಾರ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ತೀಯಾ ಸೇವಾ ಸಹಕಾರ ಸಂಘ (ನಿ) ಇದರ 2021ರ ನೂತನ ಪದಾಧಿಕಾರಿಗಳು

ಉಳ್ಳಾಲ:  ತೀಯಾ ಸೇವಾ ಸಹಕಾರ ಸಂಘ (ನಿ) ಇದರ 2021ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತೊಕ್ಕೊಟ್ಟು ಒಳಪೇಟೆಯ ಶಿವಾನಿ ಕಾಂಪ್ಲೆಕ್ಸ್ ನ  ಸಂಘದ ಕಚೇರಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಚುನಾಯಿತರಾದ  ದಿನೇಶ್ ಎಂ.ಕುಂಪಲ  ಹಾಗೂ ಉಪಾಧ್ಯಕ್ಷರಾಗಿ  ಸುನಿಲ್ .ಜೆ.ಉಚ್ಚಿಲ ಅಧಿಕಾರ ವಹಿಸಿಕೊಂಡರು. ಪ್ರಕಾಶ್ ಎಂ.ಉಳ್ಳಾಲ್, ನಾಗಪ್ಪ ಬಿ.ಅಡ್ಯಾರ್,  ಅಭಿಜಿತ್ ಬೆಳ್ಚಾಡ, ಮಾಧವ, ಸೂರಜ್, ಸತೀಶ್ ಕುಮಾರ್ ಪುಂಡಿಕಾಯ್, ಉಮೇಶ್ ಕೆ., ರಜನಿ ಕುಮಾರಿ, ಹರಿಣಾಕ್ಷಿ ಹಾಗೂ ಲತಾ ವಿ. ಸಂಘದ ನಿರ್ದೇಶಕರುಗಳಾಗಿ ಅಧಿಕಾರ ಸ್ವೀಕರಿಸಿದರು.
ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ  ಅರ್ಚಕರಾದ ಮಂಜಪ್ಪ ಕಾರ್ನವರ್,  ಅಪ್ಪು ಆತಾರ್ ಪದಗ್ರಹಣ ಸಮಾರಂಭ ನೆರವೇರಿಸಿಕೊಟ್ಟರು. ಭಗವತೀ ಬ್ಯಾಂಕ್ ಮಾಜಿ  ಅಧ್ಯಕ್ಷ ಸದಾಶಿವ ಉಳ್ಳಾಲ್,  ಭಗವತಿ  ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ದೇವದಾಸ್ ಕೊಲ್ಯ,   ಕಾಂಗ್ರೆಸ್ ಮುಖಂಡ ಫಾರುಕ್ ಉಳ್ಳಾಲ್, ಉದ್ಯಮಿ ರವಿಶೆಂಕರ್ ಶೆಟ್ಟಿ, ಲಕ್ಷ್ಮಣ್ ವಿ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರ.ಕಾ ನೀರಜ್ ಪಾಲ್ , ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಕೆ ಸುಧೀರ್, ಗಣೇಶ್ ಪೂಜಾರಿ, ನ್ಯಾಯವಾದಿ ನವನೀತ್ ಪೂಜಾರಿ ಉಪಸ್ಥಿತರಿದ್ದರು.

Exit mobile version