
ಉಳ್ಳಾಲ: ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ. 18ರ ಭಾನುವಾರದಿಂದ ಎಪ್ರಿಲ್ 26ರ ಸೋಮವಾರದವರೆಗೆ ನಡೆಯಲಿದೆ.
ಸೋಮೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋಮೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಬಿ. ರವೀಂದ್ರನಾಥ ರೈ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ನವೀಕರಣಗೊಂಡಿರುವ ಶ್ರೀ ಮಹಾಗಣಪತಿ, ಶ್ರೀ ವಿಷ್ಣಮೂರ್ತಿ, ಪಾರ್ಥಸಾರಥಿ,
ಶ್ರೀ ಗೋಪಾಲಕೃಷ್ಣ ಮತ್ತು ಶ್ರೀ ಪಂಚದುರ್ಗಿ , ಕಲ್ಲುರ್ಟಿ -ಕಲ್ಕುಡ, ನಾಗ, ರಕ್ತೇಶ್ವರೀ ಸಾನಿಧ್ಯಗಳ ಪುನರ್‍ಪ್ರತಿಷ್ಠ, ಅಷ್ಟಬಂಧ ಕಲಶಾದಿಗಳು ಕ್ಷೇತ್ರ ತಂತ್ರಿವರ್ಯರರಾದ ವೇದಮೂರ್ತಿ ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಬ್ರಹ್ಮರಥದ ಸಮರ್ಪಣೆಯೂ ನಡೆಯಲಿದೆ ಎಂದರು.
ಶ್ರೀ ಕ್ಷೇತ್ರದಲ್ಲಿ ಎ. 18ರಂದು ಭಾನುವಾರ ಗಣಪತಿ ಪ್ರಾರ್ಥನೆ, ಉಗ್ರಾಣ ಮುಹೂರ್ತ ಹಾಗೂ ಚಪ್ಪರ ಮುಹೂರ್ತದೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಬಗೊಳ್ಳಲಿದ್ದು, ಎ. 19ರಂದು ಸೋಮವಾರ ಮಧ್ಯಾಹ್ನ 2.30ಕ್ಕ ತೊಕ್ಕೊಟ್ಟು ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಹೊರೆ ಕಾಣಿಕೆ ಹಾಗೂ ನೂತನ ಬ್ರಹ್ಮರಥದ ಭವ್ಯ ಮೆರವಣಿಗೆ ನಡೆಯಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಗೋಪಾಲಕೃಷ್ಣ ಅಸ್ರಣ್ಣರು. ಶ್ರೀ ಕ್ಷೇತ್ರ ಉಳಿಯದ ಧರ್ಮದರ್ಶಿ ದೇವುಮೂಲ್ಯಣ್ಣ, ಶ್ರೀ ಕ್ಷೇತ್ರ ತಲಪಾಡಿಯ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ದೀಪಪ್ರಜ್ವಲನೆ ನಡೆಸಲಿದ್ದು, ಸಂಜೆ 5.30ಕ್ಕೆ ನೂತನ ಬ್ರಹ್ಮರಥದ ಕೊಠಡಿ ಸಮರ್ಪಣೆ ಹಾಗೂ ಬ್ರಹ್ಮರಥ ಭೂಸ್ಪರ್ಶ ನಡೆಯಲಿದ್ದು, ಬ್ರಹ್ಮರಥದ ಸೇವಾಕರ್ತರಾದ ಬಿ. ರವೀಂದ್ರನಾಥ ರೈ, ದಿ. ಮುತ್ತಪ್ಪ ರೈಗಳ ಪುತ್ರರಾದ ರಾಕಿ ಎಂ. ರೈ ಮತ್ತು ರಿಕಿ ಎಂ. ರೈ, ಬ್ರಹ್ಮರಥದ ಕೊಠಡಿಯ ಸೇವಾ ಕರ್ತರಾದ ಶ್ರೀಧರ ಭಂಡಾರಿ, ಬ್ರಹ್ಮಕಲಶೋತ್ಸವದ ಪ್ರ. ಕಾರ್ಯದರ್ಶಿ ಜನಾರ್ಧನ ಹೊಳ್ಳ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ತಂತ್ರಗಳ ಮತ್ತು ಆಚಾರ್ಯಾದಿ ರುತ್ವಿಜರ ಸ್ವಾಗತ, ರಾತ್ರಿ 7ಕ್ಕೆ ರಥ ಕೊಠಡಿಯಲ್ಲಿ ಕೊಠಡಿ ಪರಿಗ್ರಹ, ಪುಣ್ಯಾಹ, ವಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ನಡೆಯಲಿದೆ.
ಎ. 20ರಂದು ಬೆಳಗ್ಗೆಯಿಂದ 108 ಕಾಯಿ ಗಣಹೋಮ, ನವಗ್ರಹ ಶಾಂತಿ ಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ನೂತನ ಗೋಪುರದಲ್ಲಿ ಪುಣ್ಯಾಹ, ವಾಸ್ತು ಬಲಿ, ಶ್ರೀಚಕ್ರ ಪೂಜೆ, ಎ. 21ರಣದು ವಿಷ್ಣಹೋಮ, ರುದ್ರಹೋಮ, ಅನ್ನಸಂತರ್ಪಣೆ, ಸೋಮನಾಥ ಸನ್ನಿಧಿಯಲ್ಲಿ ಪುಣ್ಯಾಹ, ಪ್ರಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಅಂಕುರಾರ್ಪಣೆ, ಎ. 22ರಂದು ಗಣಪತಿ ಹೋಮ, ಅಂಕುರ ಪೂಜೆ, ಬಿಂಬ ಶುದ್ಧಿ ಕಲಶ ಪೂಜೆ, ಕಲಶಾಭಿಷೇಕ, ಪೆÇ್ರೀಕ್ತ ಹೋಮ, ಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ಎ. 23ರಂದು ಗಣಪತಿ ಹೋಮ, ಭಗತವತೀ ಸೇವೆ, ಅಂಕುರ ಪೂಜೆ, ಶಾಂತಿ ಹೋಮ, ಹೋಮ ಕಲಶಾಭಿಷೇಕ, ಅನ್ನ ಸಂತರ್ಪಣೆ, ಮಂಟಪ ಸಂಸ್ಕಾರ, ದುರ್ಗಾ ನಮಸ್ಕಾರ ಪೂಜೆ, ಭಗವತೀ ಸೇವೆ. ಎ. 24ರಂದು ಗಣಪತಿ ಹೋಮ, ತತ್ವ ಕಲಶ ಪೂಜೆ, ತತ್ವ ಹೋಮ, ತತ್ವ ಕಲಶಾಭಿಷೇ. ಅನುe್ಞÁ ಕಲಶಾಭಿಷÉೀಕ, ಮದ್ಯಾಹ್ನ ಪೂಜೆ, ಅನ್ನಸಂತರ್ಪಣೆ, ಮಹಾಗಣಪತಿ ಶ್ರೀ ಮಹಾಗಣಪತಿ, ಶ್ರೀ ವಿಷ್ಣುಮೂರ್ತಿ, ಶ್ರೀ ಗೋಪಾಲಕೃಷ್ಣ ಮತ್ತು ಶ್ರೀ ಪಂಚದುರ್ಗಿ ಸಾನಿಧ್ಯದಲ್ಲಿ ಅನುe್ಞÁ ಕಲಶಾಭಿಷೇಕ , ಧ್ಯಾನ ಸಂಕೋಚ, ಬಿಂಬಶಯ್ಯಾಗಮನ, , ಶಯನ, ಕುಂಭೇಶ ಕರ್ಕರಿ ಕಲಶ ಪೂಜೆ, ಧ್ಯಾನವಾಸ, ದ್ರವ್ಯ ಕಲಶಪೂಜೆ, ಪರಿಕಲಶ ಪೂಜೆ, ಆ„ವಾಸ ಹೋಮ, ಕಲಶಾಧಿವಾಸ, ಶ್ರೀಮಹಾಗಣಪತಿ, ಶ್ರೀ ವಿಷ್ಣುಮೂರ್ತಿ, ಶ್ರೀ ಗೋಪಾಲಕೃಷ್ಣ ಸಾನಿಧ್ಯಗಳ ಪುನ: ಪ್ರತಿಷ್ಠೆ, ಅಷ್ಟಬಂಧ ಲೇಪನ, ಕಲಶಾಭಿಷೇಕಗಳು ನಡೆಯಲಿದೆ.
ಎ. 25 ರಂದು ಶ್ರೀ ಪಂಚದುರ್ಗಿ ಅಮ್ಮನವರು, ಕಲ್ಲುರ್ಟಿ-ಕಲ್ಕುಡ , ನಾಗ, ರಕ್ತೇಶ್ವರೀ ಸಾನಿಧ್ಯಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ. ಅ„ವಾಸ ಹೋಮ, ಕುಂಭೇಶ ಕರ್ಕರಿ, ಕಲಶಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾ„ವಾಸ. ಎ.26ರಂದು ಗಣಪತಿ ಹೋಮ, ಬೆಳಗ್ಗೆ 7.22ಕ್ಕೆ ಶ್ರೀ ಸೋಮನಾಥ ದೇವರಿಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಶ್ರೀ ಬಲಿ, ಮಹಾಅನ್ನಸಂತರ್ಪಣೆ ಶ್ರೀ ಭೂತಬಲಿ, ರಥಕಲಶ, ಶತಮಾನದ ನಂತರ ಶ್ರ್ರೀ ಸೋಮನಾಥ ದೇವರ ` ಬ್ರಹ್ಮರಥಾರೋಹಣ’ – ರಥೋತ್ಸವ, ಸೇವೆಗಳು, ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದರು.
ಶ್ರೀ ಸೋಮನಾಥ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ರವೀಂದ್ರನಾಥ ರೈ, ಪ್ರಧಾನ ಕಾರ್ಯದರ್ಶಿ ಎಸ್.ಜನಾರ್ಧನ ಹೊಳ್ಳ, ಕೋಶಾ„ಕಾರಿ ಪದ್ಮನಾಭ ಶೆಟ್ಟಿ ವರ್ಕಾಡಿ, ಟ್ರಸ್ಟೀಗಳಾದ ರಾಮದಾಸ್ , ಮಾಧವಿ, ಹರಿಣಾಕ್ಷಿ, ಭಗವತೀಶ್ ಅಡ್ಕ, ವಸಂತ್, ಸದಾನಂದ ಬಂಗೇರ, ಪವಿತ್ರ ಕುಮಾರ್ ಗಟ್ಟಿ ಹಾಗೂ ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಹರೀಶ್ ಕುತ್ತಾರ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ರಾಘವ ಆರ್.ಉಚ್ಚಿಲ್, ಪದ್ಮನಾಭ ಗಟ್ಟಿ ಮತ್ತು ರಘು ಉಚ್ಚಿಲ್ ಉಪಸ್ಥಿತರಿದ್ದರು.
- ಕಳೆದ ವರ್ಷ ಕೋವಿಡ್ ಹಿನ್ನಲೆಯಲ್ಲಿ ಬ್ರಹ್ಮಕಲಶೋತ್ಸವವನ್ನು ಮುಂದೂಡಲಾಗಿತ್ತು ಲಾಕ್ಡೌನ್ ಬಳಿಕ ಶ್ರೀಕ್ಷೇತ್ರದಲ್ಲಿ ಉಳಿದ ನವೀಕರಣ ಮುಗಿದು ಎಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಉತ್ಸವ ಆಯೋಜಿಸಿದ್ದು ಈ ಬಾರಿಯೂ ಕೋವಿಡ್ನ ಎರಡನೇ ಅಲೆಯ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಕೋವಿಡ್ ನಿಯಾಮವಳಿಯಂತೆ ಕಾರ್ಯಕ್ರಮ ನಡೆಯಲಿದ್ದು. ಮಾಸ್ಕ್ ಸೇರಿದಂತೆ, ಸ್ಯಾನಿಟೈಸರ್ ಮಾಡುವ ಮೂಲಕ ಬ್ರಹ್ಮಕಲಶೋತ್ಸವವನ್ನು ನಡೆಸಲು ಅನುಮತಿ ಪಡೆದುಕೊಂಡಿದ್ದು, ಇಡೀ ಕ್ಷೇತ್ರದಲ್ಲಿ ಸ್ಯಾನಿಟೈಸರ್ ಮಾಡುವ ಕಾರ್ಯ ನಡೆಯಲಿದ್ದು ಸರಕಾರದ ಆದೇಶದಂತೆ ಕಾರ್ಯಕ್ರಮ ನಡೆಯಲಿದೆ.
ಬಿ. ರವೀಂದ್ರನಾಥ ರೈ
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ