Site icon Ullalavani

ಎಕ್ಕೂರು: ಅಪರಿಚಿತ ಕಾರು ಢಿಕ್ಕಿ ಸ್ಕೂಟರ್ ಸವಾರ ಸಾವು

ಉಳ್ಳಾಲ: ಅಪರಿಚಿತ ಕಾರು ಢಿಕ್ಕಿ ಹೊಡೆದು ರಸ್ತೆಗುರುಳಿದ ಸ್ಕೂಟರ್ ಸವಾರನ ಮೇಲೆ ಸಿಟಿ ಬಸ್ ಚಲಿಸಿದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ.66ರ ಎಕ್ಕೂರು ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.
ಧೀಮಂತ್ ರಭೀಂದ್ರ ಮೃತರು. ಅತ್ತಾವರದ ಲೆನ್ಸ್ ಕಾರ್ಟ್.ಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು ತೊಕ್ಕೊಟ್ಟುವಿನಲ್ಲಿ ಬಾಡಿಗೆ ಮನೆಯನ್ನು ಹೊಂದಿದ್ದರು. ಅಲ್ಲಿಂದ ಇಂದು ಬೆಳಿಗ್ಗೆ ಉದ್ಯೋಗಕ್ಕೆ ತೆರಳುವ ಸಂದರ್ಭ ಇವರಿದ್ದ ಸ್ಕೂಟರಿಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ರಭೀಂದ್ರ ಅವರ ಮೇಲೆ ಅದೇ ರಸ್ತೆಯಾಗಿ ಚಲಿಸುತ್ತಿದ್ದ ಸಿಟಿ ಬಸ್ ಚಲಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಸಂಚಾರಿ ಠಾಣಾ ಪೊಲೀಸರು ಆಸ್ಪತ್ರೆಗೆ ಕೊಂಡೊಯ್ದರಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version