
ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ಬಹಳಷ್ಟು ಕಾಮಗಾರಿ ನಡೆಸಿದ್ದು ಕನೀರುತೋಟ ರಸ್ತೆ ಕಾಮಗಾರಿ ಆದಷ್ಟು ಬೇಗ ನಡೆಯಲಿ. ಮುಂದಿನ ಬಾರಿ ಚುನಾವಣೆಯಲ್ಲೂ ಜನರ ಆಶೀರ್ವಾದ ಇಲ್ಲಿನ ಜನಪ್ರತಿನಿಧಿಗಳ ಮೇಲೆ ಸದಾ ಇರಲಿ ಎಂದು ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಅವರು ಕೊಲ್ಯ ಕನೀರುತೋಟ ರಸ್ತೆ ಗೆ ರೂ. 14 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟಿಕರಣ ಕಾಮಗಾರಿಗೆ ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಚಾಲನೆ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರ ಅನುದಾನದಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಲಿದ್ದು ಇನ್ನಷ್ಟು ಅನುದಾನ ಗ್ರಾಮಕ್ಕೆ ಸಿಗುವಂತಾಗಲಿ ಎಂದರು.
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಪ್ರಫುಲ್ಲದಾಸ್, ಕೋಟೆಕಾರು ಶಕ್ತಿಕೇಂದ್ರ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ, ಪ್ರ.ಕಾ ಪುರುಷೋತ್ತಮ್ ಗಟ್ಟಿ, ಹಿರಿಯ ಮುಖಂಡ ಸೀತಾರಾಮ ಬಂಗೇರ, ಕೋಟೆಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರ್ ಕನೀರುತೋಟ, ಮುಖಂಡ ಯಶವಂತ ಅಮೀನ್, ಸ್ಥಳೀಯರಾದ ಗೋವಿಂದ್ ನಾಯ್ಕ್, ಮಾಧವ್, ಮೋಹಿನಿ, ನಳಿನಾಕ್ಷಿ, ಪದ್ಮಾವತಿ, ಸರೋಜಿನಿ, ಯಶವಂತ, ಶಕುಂತಳಾ, ಈಶ್ವರ್ ಕನೀರುತೋಟ, ದೇವಿಪ್ರಸಾದ್, ಪಿ.ಡಿ ಶೆಟ್ಟಿ, ತಲಪಾಡಿ, ಗೋಪಾಲ್, ಯಶವಂತ ಅಮೀನ್, ಚಿನ್ನೋಜಿ ರಾವ್, ಮಾಧವ್ ಕುಂದರ್, ನೂತನ್, ದಾಮೋದರ್, ಕಿರಣ್, ರಾಮಚಂದ್ರ, ರಾಜೇಂದ್ರ, ಚೇತಕ್, ರೇಷ್ಮಾ, ಶೋಭಾ, ರಿತೇಶ್ ಉಪಸ್ಥಿತರಿದ್ದರು.