Site icon Ullalavani

ಅಕ್ಟೋಬರ್ 28ರಿಂದ ನ. 20ರವರೆಗೆ ಉಳ್ಳಾಲ ಉರೂಸ್


ಉಳ್ಳಾಲ: `ಉಳ್ಳಾಲ ದರ್ಗಾ’ ಎಂದೇ ಪ್ರಸಿದ್ಧವಾಗಿರುವ ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಗಳ್‍ರವರ ದರ್ಗಾದಲ್ಲಿ ಐದು ವರ್ಷಕ್ಕೊಮ್ಮೆ ಒಂದು ತಿಂಗಳುಗಳ ಕಾಲ ನಡೆಯುವ ‘ಉಳ್ಳಾಲ ಉರೂಸ್’ ಗೆ ದರ್ಗಾ ಆಡಳಿತ ಮಂಡಳಿ ಸಿದ್ಧತೆ ನಡೆಸುತ್ತಿದ್ದು, ಪವಿತ್ರ ರಂಝಾನ್ ಉಪವಾಸ ಮುಗಿದ ತಕ್ಷಣ ಉರೂಸ್ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಲಿದ್ದು, 2021ರ ಅಕ್ಟೋಬರ್ 28ರಿಂದ ನ. 20ರವರೆಗೆ ಉಳ್ಳಾಲ ಉರೂಸ್ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಶನಿವಾರ ದರ್ಗಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಳ್ಳಾಲ ದರ್ಗಾ
ಶನಿವಾರ ದರ್ಗಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ

ಧಾರ್ಮಿಕ ಶ್ರದ್ಧಾಕೇಂದ್ರವಾಗಿ ದೇಶವಿದೇಶಗಳಿಂದ ಇಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದಲೂ ಧಾರ್ಮಿಕ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. 2020ರಲ್ಲಿ ಉರೂಸ್ ಆಗಬೇಕಾಗಿದ್ದು ಕೋವಿಡ್ 19 ಹಿನ್ನಲೆಯಲ್ಲಿ ಉರುಸ್ ಕಾರ್ಯಕರಮವನ್ನು ಮುಂದೂಡಲಾಗಿತ್ತು ಇದೀಗ ಭಕ್ತಾ„ಗಳು ಉಳ್ಳಾಲ ಉರೂಸ್ ಕುರಿತ ಮಾಹಿತಿಗಾಗಿ ಕಾಯುತ್ತಿದ್ದು, ಉರೂಸು ನಡೆಯುವ 6 ತಿಂಗಳ ಮೊದಲೇ ಸಿದ್ಧತೆ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ದರ್ಗಾ ಸಮಿತಿ ಯೋಜನೆ ಹಾಕಿಕೊಂಡಿದ್ದು ಮೇ 28ಕ್ಕೆ ಆಚರಣೆಗೆ ಸಂಬಂಧಿಸಿದ ಕೊಡಿಯೇರಿಸುವ ಕಾರ್ಯ ಆರಂಭಗೊಂಡು ಅಕ್ಟೋಬರ್‍ನಿಂದ ನವಂಬರ್‍ವರೆಗೆ ಆಚರಣೆ ನಡೆಯಲಿದ್ದು, ಉಳ್ಳಾಲ ವ್ಯಾಪ್ತಿಯ ಮೊಹಲ್ಲಾಗಳ ಸದಸ್ಯರು, ಸೇರಿದಂತೆ ವಿವಿಧ ಸಮಿತಿಗಳ ರಚನೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಯು. ಕೆ. ಮೋನು, ಬಾವಾ ಮಹನಮ್ಮಧ, ಕಾರ್ಯದರ್ಶಿ ಮಹಮ್ನದ್ ತ್ವಾಹ, ಲೆಕ್ಕಪರಿಶೋದಕ ಯು.ಟಿ. ಇಲ್ಯಾಸ್, ಜೊತೆ ಕಾರ್ಯದರ್ಶಿ ನೌಷದ್ ಅಬೂಬಕ್ಕಾರ್, ಚಾರಿಟೇಬಲ್ ಉಪಾಧ್ಯಕ್ಷ ಯು ಕೆ. ಇಬ್ರಾಹಿಂ ಕಕ್ಕೆತೋಟ, ಜೊತೆ ಕಾರ್ಯದರ್ಶಿ ಎ. ಜೆ. ಮೊಯ್ದಿನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕ್ಕಾರ್, ಸದಸ್ಯರಾದ ಇಬ್ರಾಹಿಂ ಉಳ್ಳಾಲ ಬೈಲ್, ಹಸನಬ್ಬ ಕಡಪ್ಪರ, ಆಲಿಮೋನು ಉಳ್ಳಾಲ, ನಝೀರ್ ಸುಂದರಿಭಾಗ್, ಹಮ್ಮಬ್ವ ಕೋಟೆಪುರ, ಅಹಮ್ಮದ್ ಮುಕ್ಕಚ್ಚೇರಿ, ಮಯ್ಯದ್ದಿ ಕೋಡಿ,ಹಮೀದ್ ಕೋಡಿ,ಸದಸ್ಯ ಫಾರೂಕ್ ಉಳ್ಳಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಮಹಮ್ಮದ್ ತ್ವಾಹ ವಂದಿಸಿದರು.

Exit mobile version