
ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಕ್ಷಯ ಕುಮಾರ್ ಎ. ಅವರು 2020-21 ನೇ ಸಾಲಿನ ಬ್ರಿಟಿಷ್ ಕೌನ್ಸಿಲ್ ಹಾಗೂ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರತಿಷ್ಠಿತ ನ್ಯೂಟನ್ ಭಾಭಾ ಸಂಶೋಧನಾ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ.
ಅಕ್ಷಯ್ ಕುಮಾರ್ ಅವರು ಎಲೆಕ್ಟ್ರಾನಿಕ್ಸ್ ವಿಭಾಗದ ಅಧ್ಯಕ್ಷ ಪೆÇ್ರ| ನವೀನ್ ಕುಮಾರ್ ಎಸ್ ಕೆ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್ ಡಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ.ಯು.ಕೆಯ ನ್ಯೂಟನ್- ಭಾಭಾ ಫೆಲೋಶಿಪ್ ಭಾರತದ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಸಂಶೋಧನೆಯ ಅವಕಾಶವನ್ನು ಒದಗಿಸಿಕೊಡುತ್ತಿದೆ. ಅಕ್ಷಯ ಕುಮಾರ್ ಎ ಅವರು ಯುಕೆ ಸ್ಕಾಟ್ಲೆಂಡಿನ ಪ್ರತಿಷ್ಠಿತ ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಸಂಶೋಧನೆಯನ್ನು ನಡೆಸಲಿದ್ದಾರೆ. ಇವರು ಸ್ಮಾರ್ಟ್ hಣಿಷಿಗೆ ಅನುಕೂಲವಾಗುವಂತಹ ಮಣ್ಣಿನಲ್ಲಿರುವ ಪಿ. ಯಚ್ ಮತ್ತು ನ್ಯೂಟ್ರಿನ್ಟ್ ಅನ್ನು ಪತ್ತೆ ಹಚ್ಚುವ ಸಂವೇದಕಗಳನ್ನು ನ್ಯಾನೋ ಮೆಟೀರಿಯಲ್ಸ್ ಬಳಕೆಯೊಂದಿಗೆ ಅಭಿವೃದ್ಧಿ ಪಡಿಸುವ ಗುರಿ ಹೊಂದಿರುತ್ತಾರ