Site icon Ullalavani

ದೇರಳಕಟ್ಟೆ: ಫಾ. ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಪದವಿ 30ನೇ ಪದವಿ ಪ್ರದಾನ ಸಮಾರಂಭ

ಉಳ್ಳಾಲ :ಫಾ.ಮುಲ್ಲರ್ ವಿದ್ಯಾಸಂಸ್ಥೆಯ ಪ್ರವರ್ತಕರು ಆಗಿರುವ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಪಡೆದ ಜ್ಞಾನದಿಂದ  ಜಗತ್ತಿಗೆ ಹಾಗೂ ಸಮಾಜಕ್ಕೆ ಉತ್ತಮ ಸೇವೆಯನ್ನು ಒದಗಿಸುವಂತಾಗಬೇಕಿದೆ ಎಂದುಎಂದು ಫಾ. ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ ಉಪಾಧ್ಯಕ್ಷ ರೆವರೆಂಡ್ ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಹೇಳಿದರು. ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ಕಾಲೇಜಿನ‌ ಆಡಿಟೋರಿಯಂನಲ್ಲಿ ಗುರುವಾರ ನಡೆದ ಫಾ. ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ಪದವಿ  ಹಾಗೂ ಸ್ನಾತಕೋತ್ತರ ಪದವಿಯ 30ನೇ ಪದವಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ,  ಪದವಿ ಪ್ರದಾನ‌ ಮಾಡಿ ಅವರು ಮಾತನಾಡಿದರು. ಸಮಾಜಕ್ಕೆ ಹಾಗೂ ಜಗತ್ತಿಗೆ ಸೇವೆಯನ್ನು ನೀಡಲು  ಆದಷ್ಟೋ ವೈದ್ಯರನ್ನು ಈ ಸಂಸ್ಥೆ ನೀಡಿದೆ ಹಾಗೂ ನೀಡುತ್ತಾ ಬರುತ್ತಿದೆ. ಇಲ್ಲಿ ಸಂಶೋಧನೆಯನ್ನು ಮಾಡಿ  ವೈದ್ಯಕೀಯ ಪದವಿಯನ್ನು ಪಡೆದ ಪ್ರತಿಯೊಬ್ಬರು ಮುಂದೆ ಪ್ರೀತಿ ಮತ್ತು ಸಹಾನುಭೂತಿಯಿಂದ ಜನರ ಸೇವೆಯನ್ನು ಮಾಡಬೇಕು.ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಾ ಬಂದಿದ್ದು ಎಲ್ಲ ವಿಭಾಗದ ಜನರಿಗೂ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದೆಸಂಸ್ಥೆಯ ವತಿಯಿಂದ ವೈದ್ಯಕೀಯ ಪದವಿ ಹಾಗೂ ಏಳು ವಿಶೇಷತೆಗಳಲ್ಲಿ ಹೋಮಿಯೋಪಥಿ ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ನಡೆಸಲಾಗುತ್ತಿದ್ದು ಪದವೀಧರರು ಫಾ.‌ ಮುಲ್ಲರ್ ಸಂಸ್ಥೆಯ ಹೆಸರನ್ನು ಬೆಳಗಿಸುವಂತಹ ಸಾಧನೆ ಮಾಡಬೇಕು ಎಂದರು.  96ಹೋಮಿಯೋಪತಿ ಮತ್ತು 25ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ 2014-15ರ ಸಾಲಿನ 6ರಾಂಕ್ ಹಾಗೂ 2016-17ರ ಸಾಲಿನಲ್ಲಿ 8ರಾಂಕ್ ವಿಜೇತ ವಿದ್ಯಾರ್ಥಿಗಳು ಸೇರಿದಂತೆ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ‌ ವಿಶ್ವದ್ಯಾಲಯ  ಘೋಷಿಸಿದ11ಚಿನ್ನದ ಪದಕಗಳನ್ನು ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮಾಜಿ ಪ್ರಿನ್ಸಿಪಾಲ್ ಡಾ. ಶಿವ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.‌ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ, ವೈಸ್ ಪ್ರಿನ್ಸಿಪಾಲ್ ಡಾ. ವಿಲ್ಮಾ ಮೀರಾ ಡಿಸೋಜ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ರಂಜನ್ ಕ್ಲೆಮೆಂಟ್ ಬ್ರಿಟ್ಟೋ ಉಪಸ್ಥಿತರಿದ್ದರು.  ಫಾ. ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ. ಫಾ.  ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿದರು.  ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯದಪ್ರಿನ್ಸಿಪಾಲ್ ಡಾ.ಇ.ಎಸ್.ಜೆ. ಪ್ರಭು ಕಿರಣ್ ವಾರ್ಷಿಕ ವರದಿ ಮಂಡಿಸಿ, ಪದವೀಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.  ಪ್ರೆಸಿಡೆಂಟ್ ಗೋಲ್ಡ್ ಮೆಡಲ್ ಡಾ. ಮರಿಯ  ಸಾಜಿಯಾ ಅವರ ಪಾಲಾಯಿತು.  ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಆಡಳಿತಾಧಿಕಾರಿವಂ. ಫಾ. ರೋಶನ್ ಕ್ರಾಸ್ತಾ ವಂದಿಸಿದರು. ಡಾ. ರಾಜಚಂದ್ರ ಜಿ. ಹಾಗೂ ಡಾ.ಶ್ವೇತಾ ಭಟ್ ಕಾರ್ಯಕ್ರಮ ನಿರೂಪಿಸಿದರು

Exit mobile version