
ಉಳ್ಳಾಲ: ಆಸ್ಪತ್ರೆಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ಅನುಕೂಲವಾಗುವ ಸವಲತ್ತುಗಳು ಆಸ್ಪತ್ರೆ ಪೂರೈಸಬೇಕಾಗಿರುವುದು ಕರ್ತವ್ಯ. ಈ ಉದ್ದೇಶದಿಂದ ಫಾದರ್ ಮುಲ್ಲರ್ಸ್ ಸಂಸ್ಥೆಯ ಎಲ್ಲಾ ವಿಭಾಗಗಳು ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಉಪಾಧ್ಯಕ್ಷ ರೆ. ಮ್ಯಾಕ್ಸಿಂ ಎಲ್. ನೊರೊನ್ಹಾ ಅಭಿಪ್ರಾಂiÀiಪಟ್ಟರು.
ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ವಠಾರದಲ್ಲಿ ನವೀಕರಣಗೊಂಡ ಫಾದರ್ ಮುಲ್ಲರ್ ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಾತನಾಡಿದರು.
ನೂತನವಾಗಿ ಆರಂಭವಾಗಿರುವ ಸಭಾಂಗಣದ ಸದುಪಯೋಗವನ್ನು ವಿದ್ಯಾರ್ಥಿಗಳು ಹೆಚ್ಚಾಗಿ ತರಬೇತಿ ಶಿಬಿರಗಳಿಗೆ ಪಡೆದುಕೊಳ್ಳಲಿ. ಈ ಮೂಲಕ ಶೈಕ್ಷಣಿಕವಾಗಿ ಉತ್ತಮ ಸ್ಥಾನವನ್ನು ಪಡೆಯುವುದರ ಜೊತೆಗೆ ಶಿಕ್ಷಣ ಸಂಸ್ಥೆಯ ಹೆಸರನ್ನು ಉಜ್ವಲಗೊಳಿಸಲಿ ಎಂದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಅಲೋಷಿಯಸ್ ಕೊಯೆಲ್ಹೋ, ಮಾತನಾಡಿ ಒಳ್ಳೆಯ ದಿನಾವದ ಇಂದು ಸಭಾಂಗಣ ಉದ್ಘಾಟನೆ ಮತ್ತು ಘಟಿಕೋತ್ಸವವನ್ನು ಏರ್ಪಡಿಸಲಾಗಿದೆ. ಸಂಸ್ಥೆಯ ಎಲ್ಲಾ ಸಂಸ್ಥೆಗಳಿಂದಲೂ ವಿವಿಧ ಮನವಿಗಳು ಇವೆ ಹಂತಹಂತವಾಗಿ ಅದನ್ನು ಪೂರೈಸುತ್ತಾ ಬರುತ್ತೇವೆ. ಎಲ್ಲಾ ಸಂಸ್ಥೆಗಳ ಮಂದಿ ಕುಟುಂಬದ ರೀತಿಯಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಯಶಸ್ಸು ಸಾಧ್ಯವಾಗಿದೆ. ದೇವರ ದಯೆಯಿಂದ ಕುಟುಂಬದ ಒಗ್ಗೂಡುವಿಕೆ ಸಾಧ್ಯವಾಗಿದೆ. ನೂತನವಾಗಿ ಆರಂಭವಾಗಿರುವ ಸಂಸ್ಥೆಯ ಸಭಾಂಗಣದ ಸದುಪಯೋಗವನ್ನು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಆಡಳಿತಾಧಿಕಾರಿ ಫಾ.ರೋಷನ್ ಕ್ರಾಸ್ತಾ ಸಭಾಂಗಣ ಕುರಿತು ಮಾಹಿತಿ ನೀಡಿದರು. ವೈದ್ಯಕೀಯ ಅಧೀಕ್ಷಕ ಹಾಗೂ ಪ್ರಾಂಶುಪಾಲ ಡಾ. ಇ ಎಸ್ ಜೆ ಪ್ರಭುಕಿರಣ್, ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ ಉಪಸ್ಥಿತರಿದ್ದರು.
ಈ ಸಂದರ್ಭ ಸಭಾಂಗಣ ನಿರ್ಮಾಣದಲ್ಲಿ ತೊಡಗಿಸಿಕೊಂಡವರನ್ನು ಅಭಿನಂದಿಸಲಾಯಿತು.