Site icon Ullalavani

ಉಳ್ಳಾಲ ನಗರಸಭೆಯ ವತಿಯಿಂದ ಕೋವಿಡ್ ಜಾಗೃತಿ ಅಭಿಯಾನ

ಮಾಸ್ತಿಕಟ್ಟೆಯಲ್ಲಿ ಜಾಗೃತಿ ಜಾಥಾ ನಡೆಯಿತು.


ಉಳ್ಳಾಲ: ಕೋವಿಡ್ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದಿದ್ದರೆ ಕಠಿಣಕ್ರಮ ಕೈಗೊಳ್ಳಾಗುವುದು ಬುಧವಾರದಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಉಳ್ಳಾಲ ನಗರಸಭಾ ಆಯುಕ್ತ ರಾಯಪ್ಪ ಎಚ್ಚರಿಕೆ ನೀಡಿದರು.
ದ.ಕ.ಜಿಲ್ಲಾಧಿಕಾರಿ ಆದೇಶದಂತೆ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಕೋವಿಡ್-19 ಜಾಗೃತಿ ಅಭಿಯಾನ ಜಾಥದಲ್ಲಿ ಅವರು ಭಾಗಹಿಸಿ ಎಚ್ಚರಿಕೆ ನೀಡಿದರು.
ಜಾಗೃತಿ ಜಾಥಾ ಅಭಿಯಾನವು ಅಬ್ಬಕ್ಕ ಸರ್ಕಲ್‍ನಿಂದ ಆರಂಬಿಸಿ ಉಳ್ಳಾಲ ಪೇಟೆ ಮಾರ್ಗವಾಗಿ ಬಿ.ಯಂ. ಸ್ಕೂಲ್ ಮಾರ್ಗವಾಗಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಉಳ್ಳಾಲ ನಗರಸಭಾ ಅಧಿಕಾರಿಘಲು, ಪೌರಕಾರ್ಮಿಕರು, ಸಿಬಂದಿಗಳು ಸೇರಿದಂತೆ ಒಟ್ಟು ಐದು ತಂಡಗಳಾಗಿ ರಚಿಸಿ ಎಲ್ಲಾ ವಾಡ್ರಗಳಲ್ಲುಇ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಜನಸಾಮಾನ್ಯರು , ಆಟೋ ರಿಕ್ಷಾ ಚಾಲಕರು, ದ್ವಿಚಕ್ರ ಸವಾರರು, ಬಸ್ ಪ್ರಯಾಣಿಕರಿಗೆ ಉಚಿತವಾದ ಮಾಸ್ಕ್ ಗಳನ್ನು ವಿತರಿಸಿ ಆರೋಗ್ಯ ಕಾಪಾಡುವಂತೆ ಮನವಿ ಮಾಡಲಾಯಿತು. ಬಸ್‍ಗಳಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ ನೀಡಲಾಯಿತು.
ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಸದಸ್ಯರಾದ ಸಪ್ನಾ ಹರೀಶ್, ಅಬ್ದುಲ್ ಬಶೀರ್ , ಇ.ಎಮ್.ಜಬ್ಬಾರ್ , ಮುಶ್ತಾಕ್ ಪಟ್ಲ , ರವಿಚಂದ್ರ ಗಟ್ಟಿ, ಅ„ಕಾರಿಗಳಾದ ಯಾಸ್ಮಿನ್, ಬಿಂದಿಯಾ, ವಿನೋದ್, ತುಳಸಿ, ರೇಣುಕಾ, ಸಾಜಿದ್, ರವಿಕೃಷ್ಣ, ಮತ್ತಿತರರು ಭಾಗವಹಿಸಿದ್ದರು.

Exit mobile version