Site icon Ullalavani

ಗಡಿಭಾಗ ತಲಪಾಡಿಯಲ್ಲಿ ಮತ್ತೆ ಕೊರೊನಾ ಚೆಕ್ ಪಾಯಿಂಟ್ , ಆರ್ ಟಿಪಿಸಿಆರ್ ವರದಿ ಕಡ್ಡಾಯ ಕೊಡುವಂತೆ ಒತ್ತಾಯ


ಉಳ್ಳಾಲ: ದ.ಕ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗ ತಲಪಾಡಿಯಲ್ಲಿ ಶುಕ್ರವಾರ ಬೆಳಗ್ಗಿನಿಂದ ಕೋವಿಡ್ ಚೆಕ್ ಪಾಯಿಂಟ್ ಆರಂಭಿಸಲಾಗಿದೆ. ಬೆಳಗ್ಗಿನ ಸಮಯದಲ್ಲಿ ಬಸ್ಸುಗಳನ್ನು ನಿಲ್ಲಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದ ನಿಯೋಗ ಪರಿಶೀಲನೆಗೆ ಇಳಿದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತಲಪಾಡಿ ರೂಟ್ ಬಸ್ಸು, ಕೇರಳ ಸಾರಿಗೆ  ಬಸ್ಸುಗಳು, ಕರ್ನಾಟಕ ಸಾರಿಗೆ ಬಸ್ಸುಗಳನ್ನು ಅಧಿಕಾರಿಗಳು  ತಡೆಹಿಡಿದು ಆರ್‍ಟಿಪಿಸಿಆರ್ ವರದಿಯನ್ನು ಕೇಳಿದರು. ಆದರೆ ಬಹುತೇಕ ಮಂದಿಯಲ್ಲಿ ವರದಿ ಇಲ್ಲದೇ ಇದ್ದಾಗ,  ಮಂಗಳೂರಿಗೆ ತೆರಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ  ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮಾ.20 ರಿಂದ ಕಡ್ಡಾಯವಾಗಿ ಕೇರಳದಿಂದ ಬರುವ ಮಂದಿ ಆರ್ ಟಿಪಿಸಿ ಆರ್ ವರದಿ ತರುವಂತೆಯೂ,  ವರದಿ ಇಲ್ಲದೇ ಇದ್ದಲ್ಲಿ ವಾಪಸ್ಸು ಕಳುಹಿಸುವ ಎಚ್ಚರಿಕೆಯನ್ನು ನೀಡಿದರು.
ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದ  ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ಬಾಯರಿ  ಮಾಧ್ಯಮದ ಜತೆಗೆ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಕಟ್ ಡೌನ್  ಮಾಡುವ ಸಲುವಾಗಿ ಗಡಿಭಾಗದಲ್ಲಿ ಕೊರೊನಾ ಚೆಕ್ ಪಾಯಿಂಟ್ ಅನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ ಒಂದು ವಾರದಿಂದ  ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಪ್ರಕರಣಗಳ ಕುರಿತು ವಿಶ್ಲೇಷಿಸಿದಾಗ ಹೆಚ್ಚಿನ ಪ್ರಕರಣಗಳು ಕೇರಳ ರಾಜ್ಯದಿಂದ ಬಂದವರಾಗಿರುತ್ತಾರೆ. ಅದಕ್ಕಾಗಿ ಕೇರಳದಿಂದ ಬರುವವರ ಮೇಲೆ ನಿಗಾ ಇರಿಸುವ ಸಲುವಾಗಿ ತಲಪಾಡಿ  ಗಡಿಭಾಗದಲ್ಲಿ ಚೆಕ್ ಪಾಯಿಂಟ್ ಇರಿಸಲಾಗಿದೆ. ಅಲ್ಲಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು, ನೆಗೆಟಿವ್ ವರದಿ ಬಂದವರನ್ನು ಮಾತ್ರ ರಾಜ್ಯಕ್ಕೆ ಪ್ರವೇಶಿಸುವ ಕೆಲಸ  ನಾಳೆಯಿಂದ ಆರಂಭಿಸಲಾಗುವುದು. ಜೊತೆಗೆ ನೆಗೆಟಿವ್ ವರದಿಯನ್ನು ಹಿಡಿದುಕೊಂಡು ಬಂದವರಿಗೆ ಕರ್ನಾಟಕ ಪ್ರವೇಶಿಸುವ ಅವಕಾಶ ಕಲ್ಪಿಸಲಾಗುವುದು ಎಂದು  

 ಈ ವೇಳೆ ತಾಲೂಕು ತಹಸೀಲ್ದಾರ್ ಗುರುಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಕಂದಾಯ ನಿರೀಕ್ಷಕ ಸ್ಟೀಫನ್, ತಲಪಾಡಿ ಪಿಡಿಓ ಕೇಶವ ಪೂಜಾರಿ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೆÇಲೀಸರು ಉಪಸ್ಥಿತರಿದ್ದರು.

Exit mobile version