Site icon Ullalavani

ಕಲ್ಲಾಪು: ಹಿಟ್ ಆಂಡ್ ರನ್ ಸ್ಕೂಟರ್ ಸವಾರ ಬಲಿ

ಉಳ್ಳಾಲ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನ ತೊಕ್ಕೊಟ್ಟು ಕಲ್ಲಾಪಿನಲ್ಲಿ ನಿನ್ನೆ ಮಧ್ಯರಾತ್ರಿ ವೇಳೆ ಸಂಭವಿಸಿದೆ.

ಜಲ್ಲಿಗುಡ್ಡೆ ನಿವಾಸಿ ಪ್ರಶಾಂತ್(32) ಮೃತರು.  ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ತೆರಳಿ ಮನೆಗೆ ಹಿಂತಿರುಗುವ ವೇಳೆ ಘಟನೆ ನಡೆದಿದೆ.ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ವಿವಾಹಿತರಾಗಿರುವ ಪ್ರಶಾಂತ್ ಪತ್ನಿ ಮತ್ತು ಏಳರ ಹರೆಯದ ಗಂಡು ಮಗುವನ್ನು ಅಗಲಿದ್ದಾರೆ.

Exit mobile version