Site icon Ullalavani

ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

ಉಳ್ಳಾಲ: ಹಳೆ ವೈಷಮ್ಯಕ್ಕೆ ಸಂಬಂಧಿಸಿ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿರೋಡ್ ಸಮೀಪ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.

ಮೂಲತ: ಪುತ್ತೂರು ನಿವಾಸಿ , ಸದ್ಯ ತಲಪಾಡಿಯಲ್ಲಿ  ಇರುವ ಶಿವರಾಮ (38) ಹಲ್ಲೆಗೊಳಗಾದವರು. ಕೆ.ಸಿರೋಡ್ ಸಮೀಪ ನಡೆಯುತ್ತಿದ್ದ ದೈವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಸಂದರ್ಭ ಕುಂಜತ್ತೂರು ನಿವಾಸಿ ಆದಿ ಮತ್ತು ಐವರ ತಂಡ ಸ್ಥಳಕ್ಕಾಗಮಿಸಿ ಶಿವರಾಮನಿಗೆ ಹಲ್ಲೆ ನಡೆಸಿದ್ದಾರೆ. ಕುಂಜತ್ತೂರು ಕ್ಲಬ್ ವಿಚಾರಕ್ಕೆ ಸಂಬಂಧಿಸಿ ಶಿವರಾಮ ಮತ್ತು ಕುಂಜತ್ತೂರು ನಿವಾಸಿ ಯುವಕರಿಗೆ ವೈಷಮ್ಯ ಇತ್ತು ಎನ್ನಲಾಗಿದೆ. ಈ ಸಂಬಂಧ ಹಲ್ಲೆ ನಡೆದಿದೆ. ಶಿವರಾಮ ಹಿಂದೆ ಬಸ್ ನಲ್ಲು ನಿರ್ವಾಹಕನಾಗಿದ್ದು, ಸದ್ಯ ಮರೋಳಿ ಬಾರ್ ನಲ್ಲಿ ಕಾರ್ಮಿಕನಾಗಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version