Site icon Ullalavani

ಖಾಸಗಿ ಮತ್ತು ಎನ್‍ಜಿಒಗಳಿಂದ ಗೇರು ಕೃಷಿ ಉತ್ತೇಜನ ಕಾರ್ಯಕ್ರಮ ನಡೆಯಲಿ ಉಳ್ಳಾಲ ಕಾಪಿಕಾಡಿನಲ್ಲಿ ನಡೆದ ಗೇರು ಮೇಳ-2021 ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಅಭಿಮತ

ಉಳ್ಳಾಲ: ಗೇರು ಕೃಷಿ ಅಭಿವೃದ್ಧಿಯ ಕುರಿತಾಗಿ ಉತ್ತೇಜನದ ಕಾರ್ಯಕ್ರಮಗಳು ತೀರಾ ಕಡಿಮೆಯಾಗಿದ್ದು ಜನರು ಸರಕಾರವನ್ನು ಮಾತ್ರ ಅವಲಂಬಿಸುವಂತಾಗದೆ ಖಾಸಗಿ ಅಥವಾ ಎನ್‍ಜಿಒಗಳ ಪ್ರಾಯೋಜಕತ್ವದಲ್ಲಿ ಉತ್ತೇಜನ ನೀಡುವ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಮಂಗಳೂರು, ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘ ಮಂಗಳೂರು, ತೋಟಗಾರಿಕೆ ಇಲಾಖೆ ದ.ಕ. , ಕೃಷಿ ಇಲಾಖೆ ದ.ಕ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಮತ್ತು ಬ್ರಹ್ಮಾವರ , ಜಿಲ್ಲಾ ಕೃಷಿಕ ಸಮಾಜ ದ.ಕ. , ಬ್ರಹ್ಮಾವರದ ಡಿಪೆÇ್ಲೀಮಾ ಕೃಷಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉಳ್ಳಾಲ ಕಾಪಿಕಾಡಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ “ಗೇರು ಮೇಳ”-2021 ಮತ್ತು “ವಿಚಾರ ಸಂಕಿರಣ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯ ಸಂಪಾಜೆಯಿಂದ ಕಾರವಾರದವರೆಗೆ ಗೇರು ಇಳುವರಿಯ ಯೋಜನೆಯಾಗಿತ್ತು. ಆದರೆ ಇತ್ತೀಚೆಗೆ ಬೆಳಗಾಂ ಮತ್ತು ಕೋಲಾರದಲ್ಲಿ ಗೇರು ಕೃಷಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಮ್ಮ ದೇಶದಲ್ಲಿ ಕೇವಲ 50ಸಾವಿರ ಮೆಟ್ರಿಕ್ ಟನ್ ಗೇರು ಬೆಳೆಯಲಾಗುತ್ತಿದೆ. ವಿದೇಶದಿಂದ 2.50ಲಕ್ಷ ಮೆಟ್ರಿಕ್ ಟನ್ ಗೇರು ಅನಿವಾರ್ಯವಾಗಿ ಆಮದು ಮಾಡಬೇಕಾಗಿರುವುದರಿಂದ ವಿದೇಶಿ ವಿನಿಮಯ ನಷ್ಟವಾಗುತ್ತಿದೆ. ವಿಯೆಟ್ನಾಂ ಎಂಬ ಚಿಕ್ಕ ರಾಷ್ಟ್ರ 4.50ಲಕ್ಷ ಮೆಟ್ರಿಕ್ ಟನ್ ಗೇರು ಉತ್ಪಾದಿಸಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದು, ಅಲ್ಲಿ ಗೇರು ಬೆಳೆಗೆ ಸಿಗುತ್ತಿರುವ ಉತ್ತೇಜನವೇ ಕಾರಣ ಎಂದರು.
ಶಿವಮೊಗ್ಗ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತಾರಣಾ ನಿರ್ದೇಶಕ ಡಾ. ವೆಂಕಟೇಶ್ ಎನ್. ಹುಬ್ಬಳ್ಳಿ ದಿಕ್ಸೂಚಿ ಭಾಷಣ ಮಾಡಿದರು.
ಶಿವಮೊಗ್ಗದ ಕೃಷಿ ತೋಟಗಾರಿಕೆ ವಿವಿಯ ವಿಸ್ತಾರಣಾ ನಿರ್ದೇಶಕ ಡಾ. ಕೆ.ಸಿ. ಶಶಿಧರ್ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಹಾಗೂ
ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಷ್ ಡಿ. ಸಿಲ್ವ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ.ಎಂ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪ್ರಗತಿಪರ ಕೃಷಿಕರುಗಳಾದ ಪುತ್ತೂರಿನ ಕಿಯ್ಯಾರು ಗ್ರಾಮದ ದೇರ್ಲ ಕರುಣಾಕರ ರೈ, ಮೂಡಾಯೂರು ನಟೇಶ್ ಎಂ, ಮಾರ್ನಮಿಕಟ್ಟೆಯ ಬ್ಲಾನಿ ಬಿ. ಡಿಸೋಜ, ಮೂಡುಬಿದಿರೆಯ ರಾಜವರ್ಮ ಬೈಲಂಗಡಿ, ವೇಣೂರಿನ ಮಹೇಶ್ ಯು.ಎಸ್ ಅವರನ್ನು ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಮಂಗಳೂರಿನ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಸೀತಾ ಎಂ.ಸಿ, ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಎ. ಸೆಂಥಿಲ್ ವೇಲ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯಕ್, ಪ್ರಧಾನ ವಿಜ್ಞಾನಿ ಬಾಲಸುಬ್ರಮಣ್ಯ ಪುತ್ತೂರು, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ಕಾರ್ಯದರ್ಶಿ ಮನೋಹರ ಶೆಟ್ಟಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಧನಂಜಯ್. ಬಿ ಹಾಗೂ ಹಿರಿಯ ವಿಜ್ಞಾನಿ ಟಿ. ಜೆ. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿರಾಜ ಶೆಟ್ಟಿ ಜಿ. ಸ್ವಾಗತಿಸಿದರು.
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಕ್ಷೇತ್ರ ಸಹಾಯಕ ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಾವರದ ಕೃಷಿ ಡಿಪೆÇ್ಲಮಾ ಕಾಲೇಜಿನ ಪ್ರಿನ್ಸಿಪಾಲ್ ಡಾ. ಕೆ.ವಿ.ಸುಧೀರ್ ಕಾಮತ್ ವಂದಿಸಿದರು.

Exit mobile version