UN Newsnetworks
ಉಳ್ಳಾಲ: ಅಯೋಧ್ಯೆ ರಾಮನ ಮಂದಿರವಲ್ಲ, ಅದು ಆರ್ ಎಸ್ ಎಸ್ ನ ಮಂದಿರವಾಗಿದೆ. ಮುಸ್ಲಿಂ ಉದ್ಯಮಿಗಳು , ವ್ಯಾಪಾರಸ್ಥರು ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಕ್ಕೆ ಬಂದಲ್ಲಿ ಒಂದು ರೂಪಾಯಿ ಕೂಡ ಕೊಡದಿರಿ. ಸಿಎಎ ಎನ್ ಆರ್ ಸಿ ಯಾಔ ರೀತಿಯಲ್ಲಿ ತ್ಯಜಿಸಿದ್ದೀರಿ ಅದೇ ರೀತಿಯಲ್ಲಿ ಧೈರ್ಯದಿಂದ ಹಿಂದಕ್ಕೆ ಕಳುಹಿಸಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹಮ್ಮದ್ ವಿವಾದಸ್ಪದ ಹೇಳಿಕೆ ನೀಡಿದ್ದಾರೆ.
ಅವರು ಉಳ್ಳಾಲ ಒಂಭತ್ತುಕೆರೆಯ ಅನಿಲ ಕಂಪೌಂಡಿನಲ್ಲಿ ಪಿಎಫ್ ಐ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎರಡು ದಿನಗಳ ಹಿಂದೆ ನಡೆದ ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜತೆಗೆ ಘೋಷಣೆಯಡಿ ಹಮ್ಮಿಕೊಂಡ ಯುನಿಟಿ ಮಾಚ್ ್ ಮತ್ತು ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಆರ್ ಎಸ್ ಎಸ್ ಎಂಬುದು ಹಿಂದೂ ವಿರೋಧಿ ಸಂಘಟನೆ. ದೇವಸ್ಥಾನದ ಜಾಗದ ಹೆಸರಿನಲ್ಲಿ ಹೋರಾಡಿ ಅಮಾಯಕ ಮುಸ್ಲಿಮರನ್ನು ಹತ್ಯೆಗೈದು, ಇದೀಗ ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಸಿಕ್ಕರೂ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಹೆಸರಿನಲ್ಲಿ ಗಲ್ಲಿಗಲ್ಲಿಗಳಲ್ಲಿ ಮುಸಲ್ಮಾನರಿಗೆ ಹೊಡೆದು ಗಲಭೆಗಳನ್ನು ನಡೆಸಲಾಗುತ್ತಿದೆ. ಹಿಂದೂ ಧರ್ಮಕ್ಕೆ ಮತ್ತು ಆರ್ ಎಸ್ ಎಸ್ ಗೆ ಯಾಔಉದೇ ರೀತಿಯ ಸಂಬಂಧವಿಲ್ಲ. ಜಗತ್ತಿನಲ್ಲಿ ದೇಶದ ಹಿಂದೂಗಳ ಮರ್ಯಾದೆಯನ್ನು ತೆಗೆಯಲು ಆರ್ ಎಸ್ ಎಸ್ ಪ್ರಮುಖ ಕಾರಣ ಎಂದು ವಿವಾದಾತ್ಮಕವಾಗಿ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.
ಈ ಸಂದರ್ಭ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಎಫ್ ಐ ಮುಖಂಡರುಗಳಾದ ಶಾಫಿ ಬೆಳ್ಳಾರೆ, ಅಯ್ಯೂಬ್ ,ಮಜೀದ್ ತುಂಬೆ, ಅಕ್ರಮ್ ಹಸನ್, ಮೊದಲಾದವರು ಉಪಸ್ಥಿತರಿದ್ದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪು ಖಂಡಿಸಿರುವುದು, ಅನುಮತಿಯಿಲ್ಲದೆ ಯುನಿಟಿ ಮಾಚ್ ್ ಮಾಡಿರುವುದು, ಆರ್ ಎಸ್ ಎಸ್ ಸಂಘಟನೆ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿಸಂಘರ್ಷಕ್ಕೆ ದಾರಿ ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಕಾರ್ಯಕ್ರಮ ಆಯೋಜಿಸಿದ ಅಬ್ದುಲ್ ಖಾದರ್, ಶಾಹೀದ್ ದೇರಳಕಟ್ಟೆ, ಮುನೀಬ್ ಬೆಂಗ್ರೆ, ಖಲೀಲ್ ಕಡಪ್ಪುರ, ಇಮ್ತಿಯಾಝ್ ಕೋಟೆಪುರ, ರಮೀಝ್ ಕೋಡಿ, ಯುನಿಟಿ ಮಾಚ್ ್ ಕಮಾಂಡರ್ ಸಫ್ವಾನ್ ಎಂಬವರ ವಿರುದ್ಧ ಕಾಯ್ದೆ 143, 147, 188,283, 153ಎ, 505(1)(ಬಿ), 149 ಕಾಯ್ದೆಯಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.