Site icon Ullalavani

ಫೆ-19 ರಂದು ಉಳ್ಳಾಲದಲ್ಲಿ ಗೇರು ಮೇಳ ಮತ್ತು ವಿಚಾರ ಸಂಕಿರಣ

ಉಳ್ಳಾಲ : ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಕಾಪಿಕಾಡ್ ಮಂಗಳೂರು ಇದರ ಆಶ್ರಯದಲ್ಲಿ `ಗೇರು ಮೇಳ ಮತ್ತು ವಿಚಾರ ಸಂಕಿರಣ’ ಪೆ.19ರಂದು ಶುಕ್ರವಾರದಂದು ಬೆಳಗ್ಗೆ 10.00 ರಿಂದ ಸಂಜೆ 4ರವರೆಗೆ ಉಳ್ಳಾಲ, ಕಾಪಿಕಾಡ್‍ನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆಯಲಿದೆ.


ಈ ತರಬೇತಿ ಕಾರ್ಯಕ್ರಮದಲ್ಲಿ, ವಿವಿಧ ಗೇರು ತಳಿಗಳು, ಗೇರು ಬೇಸಾಯ, ಗೊಬ್ಬರಗಳ ಕೊಡುವ ವಿಧಾನ, ಕೀಟ ಮತ್ತುರೋಗ ನಿಯ0ತ್ರಣ, ಗಿಡಗಳ ಸವರುವಿಕೆ, ಆಕಾರಕೊಡುವುದು, ಗೇರು ಸಸಿಮಡಿ ನಿರ್ವಹಣೆ, ಮಣ್ಣು ಪರೀಕ್ಷೆ, ನೀರು ನಿರ್ವಹಣೆ ಮತ್ತು ಸಂರಕ್ಷಣೆ, ಪೆÇದೆಮೆಣಸು ಮತ್ತು ಗೇರು ಹಣ್ಣಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮುಂತಾದ ವಿಷಯಗಳ ಬಗ್ಗೆ ತರಬೇತಿ ಮತ್ತು ತೋಟಗಾರಿಕಾ ಬೆಳೆಗಳ ತಾಂತ್ರಿಕ ಮಾಹಿತಿಕೊಡಲಾಗುವುದು. ಹಾಗೆಯೇ ವಿವಿಧ ವಸ್ತು ಪ್ರದರ್ಶನ ಮಳಿಗೆ, ತರಕಾರಿ ಗಿಡಗಳ ಕೈತೋಟ ಹಾಗೂ ಕ್ಷೇತ್ರ ವೀಕ್ಷಣೆಗೆಅವಕಾಶವಿದ್ದು ರೈತರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ರವಿರಾಜ ಶೆಟ್ಟಿ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version