Site icon Ullalavani

ಕ್ರೇನ್ ತಗಲಿದ ಮೆಸ್ಕಾಂ ವಯರ್ ತಪ್ಪಿದ ಮಹಾದುರಂತ

UN networks

ಕುತ್ತಾರು: ರಸ್ತೆ ಅಗಲೀಕರಣ ವೇಳೆ ಮೆಸ್ಕಾಂ ವಯರಿಗೆ ಕ್ರೇನ್ ತಗಲಿದ ಪರಿಣಾಮ ಕ್ರೇನ್ ಚಾಲಕ ಪವಾಡಸದೃಶ ಪಾರಾಗಿರುವ ಘಟನೆ ತೊಕ್ಕೊಟ್ಟು- ಮೆಲ್ಕಾರ್ ರಸ್ತೆಯಲ್ಲಿ ನಡೆದಿದೆ.

ಕ್ರೇನ್ ಮೂಲಕ ರಸ್ತೆ ಅಗಲೀಕರಣ ನಡೆಸಲಾಗುತ್ತಿತ್ತು.‌ಈ ಸಂದರ್ಭದಲ್ಲಿ ಮೆಸ್ಕಾಂ ವಯರ್ ಗೆ ಕ್ರೇನ್ ತಗಲಿದೆ ಪರಿಣಾಮ ವಯರ್ ರಸ್ತೆ ಗೆ ಬಿದ್ದಿದೆ. ಕ್ರೇನ್ ಚಾಲಕ ತಕ್ಷಣವೇ ಕ್ರೇನ್ ನಿಂದ ಹಾರಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಈ ರಸ್ತೆಯ ಮೂಲಕ ನರ್ಸಿಂಗ್ ವಿದ್ಯಾರ್ಥಿ ನಡೆದಾಡುತ್ತಿದ್ದು
ರಸ್ತೆಗೆ ಬಿದ್ದ ವಯರಿನಿಂದ ಸೆಕೆಂಡುಗಳ ಅಂತರದಲ್ಲಿ ಪರಾಗುವ ಮೂಲಕ ಮಹಾದುರಂತವೊಂದು ತಪ್ಪಿದೆ.‌

ಕೆಲ ನಿಮಿಷಗಳ ಕಾಲ ರಸ್ತೆ ಸಂಚಾರದಲ್ಲಿ ಅಡ್ಡಿ ಉಂಟಾಗಿದ್ದು ಮೆಸ್ಕಾಂ ಎಇಇ ದಯಾನಂದ್ ಸ್ಥಳಕ್ಕೆ ಭೇಟಿ, ಲೈನ್ ಮೆನ್ ಗಳಿಂದ ಜೀವದ ಹಂಗು ತೊರೆದು ತುರ್ತು ಕಾರ್ಯಾಚರಣೆ ನಡೆಸುತ್ತಿದ್ದು ಮದನಿನಗರ ನಿವಾಸಿಗಳುಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

ಮಹಾದುರಂತ: ಬಸ್, ವಾಹನಗಳ ಮೇಲೆ ಹಲವು ಕಿಲೋ ವ್ಯಾಟ್ ವಿದ್ಯುತ್ ಹೊಂದಿರುವ ಸಾಲು ಸಾಲು ತಂತಿಗಳು ಬೀಳುವ ಸಾಧ್ಯತೆ ಇತ್ತು.

Exit mobile version