UN networks
ಉಳ್ಳಾಲ : ಮಂಗಳೂರು ಕ್ಷೇತ್ರದ ಶಾಸಕರೇ ಬೆಂಗಳೂರಿಗೆ ಹೋಗುವುದನ್ನು ಕಡಿಮೆ ಮಾಡಿ ಉಳ್ಳಾಲದಲ್ಲಿ ಸುತ್ತು ಹಾಕಿ ಇಲ್ಲಿನ ವಿಚಾರಗಳನ್ನು ಅರಿವು ಮಾಡಿಕೊಳ್ಳಲಿ. ಮಂದಿರ, ಕಟ್ಟೆಯಲ್ಲಿ ಇಂತಹ ಘಟನೆ ನಡೆದಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ದುಷ್ಕøತ್ಯಗಳು ಮಸೀದಿಯಲ್ಲಿ ಆಗುತ್ತಿದ್ದರೆ ಶಾಸಕರು ಅರ್ಥ ಮಾಡಿಕೊಳ್ಳಬೇಕಿದೆ. ಈ ಕಾಲದಲ್ಲಿ ಕೊರಗಜ್ಜ ಕಾಯೆರ್ ದಂಟೆ ಬೀಸಿದರೆ ಅನ್ಯಾಯ ಎಸಗಿದವರ ವಿಳಾಸ ಸಿಗಲು ಸಾಧ್ಯವಿಲ್ಲ. ಯಾರೇ ದುಷ್ಕøತ್ಯ ಮಾಡಿದರೂ ಆತ ಸಮಾಜದ ಎದುರು ವಿಕೃತ ಕಾಮಿ. ಫರಂಗಿಪೇಟೆಯಲ್ಲಿಲ್ಲದ ರಿಯಾಝ್ ಫರಂಗಿಪೇಟೆ ಎರಡು ಸೀಟು ಹಿಡಿದುಕೊಂಡು ತಾಂಟಲು ಬರುತ್ತಿರುವುದು ಹಾಸ್ಯಾಸ್ಪದ. ತಾಕತ್ತಿದ್ದಲ್ಲಿ ಹಿಂದೂಗಳಿರುವ ಜಾಗದಲ್ಲಿ ನಿಂತು ಗೆದ್ದು ತೋರಿಸಲಿ. ಅವರ ಪಕ್ಷದ ಸಿದ್ಧಾಂತದ ಸ್ವತಂತ್ರ್ಯಕ್ಕೆ ಅರ್ಥವಿಲ್ಲ. ಅತಂತ್ರದಲ್ಲಿ ಸ್ವತಂತ್ರ್ಯವಿದ್ದು ಎದ್ದರೆ ಫರಂಗಿಪೇಟ್ ವಿಳಾಸ ಸಿಗಲು ಸಾಧ್ಯವಿಲ್ಲ. ಕೊರಗಜ್ಜನ ಸನ್ನಿಧಾನದಲ್ಲಿ ಚಕ್ಕುಳಿ ಬೀಡ ಇಟ್ಟು, ಅನ್ಯಾಯ ಮಾಡಿದವರ ವಿರುದ್ಧ ಪ್ರಾರ್ಥಿಸಿದರೆ ಅಂತಹವರ ಕುಟುಂಬದ ಸಂತಾನವೇ ನಶಿಸಿ ಹೋಗಿರುವ ಉದಾಹರಣೆಗಳಿವೆ.
ಮೂತ್ರ ಮಾಡಿದಲ್ಲಿ ಫರಂಗಿಪೇಟೆ ಸುಳಿವಿಲ್ಲ : ಬಿಜೆಪಿ ರಾಜ್ಯಾಧ್ಯಕ್ಷರು, ಸುರತ್ಕಲ್, ಬೆಳ್ತಂಗಡಿ ಶಾಸಕರನ್ನು ತಾಂಟ್ಲಿಕೆ ಹೇಳಿರುವ ರಿಯಾಝ್ ಫರಂಗಿಪೇಟೆ, ಅಷ್ಟೂ ಜನ ನಿಂತು ಮೂತ್ರ ಮಾಡಿದಲ್ಲಿ ಸುಳಿವು ಸಿಗಲು ಅಸಾಧ್ಯ ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಮುಸ್ಲಿಂ ಸಮಾಜದಲ್ಲಿರುವ ಹಸಿವು ತಣಿಸುವ ಕಾರ್ಯವನ್ನು ಮಾಡಲಿ . 8-9 ಮದುವೆಗಳಾಗಿ 60 ಜನರ ಕುಟುಂಬದಲ್ಲಿ ತೀರಾ ಬಡತನವಿರಬಹುದು. ಅದನ್ನು ಹೊರತುಪಡಿಸಿ ಉಳಿದ ಧರ್ಮದವರ ವಿಚಾರಕ್ಕೆ ಕೈಹಾಕುವ ಅಗತ್ಯವಿಲ್ಲ ಎಂದರು.
ವಿಶ್ವ ಹಿಂದೂ ಪರಿಷತ್‍ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಮಾತನಾಡಿ ಭಾರತ ದೇಶವನ್ನು ನಾಶ ಮಾಡಬೇಕಾದರೆ ಹಿಂದೂ ಧರ್ಮವನ್ನು ನಾಶ ಮಾಡಿದರೆ ಸಾಕು ಈ ನಿಟ್ಟಿನಲ್ಲಿ ದೇಶವನ್ನು ಇಸ್ಲಾಮಿಕರಣ ಮಾಡುವ ಷಡ್ಯಂತ್ರ ನಡೆಯುತ್ತಿದ್ದು ಇದರ ಒಂದು ಆಂಗವಾಗಿ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹಾನಿ ಮಾಡುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಲಬ್ ಜಿಹಾದ್, ಲ್ಯಾಂಡ್ ಜಿಹಾದ್ ಮೂಲಕ ಹಿಂದೂಗಳನ್ನು ಅತಂತ್ರಗೊಳಿಸುವ ಕಾರ್ಯ ನಡೆಯುತ್ತಿದೆ. ಇಂತಹ ಘಟನೆಗಳು ನಡೆದಾಗ ಕೇವಲ ಹಿಂದೂ ಸಂಘಟನೆಗಳು ಮಾತ್ರ ಪ್ರತಿಭಟಿಸುವುದಲ್ಲ ಇಡೀ ಹಿಂದೂ ಸಮಾಜ ಒಟ್ಟಾಗಿ ನಿಂತು ಪ್ರತಿಭಟಿಸುವ ಕಾರ್ಯ ಆಗಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಪ್ರಯೋಗ ಶಾಲೆ : ಮತಾಂಧ ಶಕ್ತಿಗಳು ಹಿಂದೂಗಳ ಮೇಲೆ ದಾಳಿ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಹಿಂದೂಗಳ ವಿರುದ್ಧ ನಡೆಯುವ ಹಿಂದೂ ವಿರೋ„ ಘಟನೆಗಳು ಆರಂಭವಾಗುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಅದನ್ನು ರಾಜ್ಯದಾದ್ಯಂತ ನಡೆಸುತ್ತಾರೆ. ಹಿಂದೂ ಮುಖಂಡರ ಹತ್ಯೆಯೂ ನಡೆದದ್ದು ಜಿಲೆಯಲ್ಲಿ ಬಳಿಕ ರಾಜ್ಯದಾದ್ಯಂತ ಹಿಂದೂ ಮುಖಂಡರ ಹತ್ಯೆ ನಡೆಯಿತು. ಇದೀಗ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದುಷ್ಕøತ್ಯಗಳು ನಡೆದರೂ ನಾವು ಇನ್ನೂ ಎಚ್ಚೆತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಒಂದು ಧರ್ಮದ ದೇವರ ವಿರುದ್ಧ ಪೆÇೀಸ್ಟ್ ಹಾಕಿದಾಗ ಮನೆ, ಪೆÇಲೀಸ್ ಠಾಣೆ ಸೇರಿದಂತೆ ಇಡೀ ಊರನ್ನೇ ಸುಟ್ಟು ದಾಂದಲೆ ಮಾಡಿದ್ದಾರೆ ಈ ನಿಟ್ಟಿನಲ್ಲಿ ಹಿಂದೂ ಧರ್ಮದ ಬಾಂದವರು ಒಟ್ಟಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ನೀ ತಾಂಟ್ರೆ ನಾ ತಾಂಟ್ರೆ ಕಾಮಿಡಿ ಪೀಸ್ : ಇತ್ತಿಗೆ ರಾಜಕೀಯ ಪಕ್ಷದ ಮುಖಂಡರೊಬ್ಬರ `ನೀ ತಾಂಟ್ರೆ ನಾ ತಾಂಟ್ರೆ’ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಆ ವ್ಯಕ್ತ್ತಿ ಕಾಮಿಡಿ ಪೀಸ್ ಆಗುತ್ತಿದ್ದಾನೆ. ಹಿಂದೂ ಧರ್ಮ ಲಕ್ಷಾಂತರ ವರ್ಷದಿಂದ ಭಾರತದಲ್ಲಿ ಇದೆ. ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಧರ್ಮದವನೊಬ್ಬ ಇಂತಹ ಹೇಳಿಕೆಗಳು ಹಾಸ್ಯಸ್ಪದವಾಗಿದ್ದು, ಹಿಂದೂ ಧರ್ಮ ಹೋರಾಟಕ್ಕೆ ಸಿದ್ಧವಾಗಿದೆ. ಈಗಾಗಲೇ ಆಯೋಧ್ಯೆ ಆಯಿತು, ಮುಂದಿನ ಸರದಿ ಕಾಶಿ ಮತ್ತು ಮಥುರವಾಗಿದ್ದು ತಾಕತ್ತಿದ್ದರೆ ನಿಲ್ಲಿಸಲು ತಾಂಟಲು ಸಿದ್ಧರಾಗಿ ಎಂದರು.
ಬಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಮಾತನಾಡಿ ಉಳ್ಳಾಲ ಸೇರಿದಂತೆ ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳ ಮೇಲೆ ಹಾನಿ ಮಾಡಿದವರನ್ನು ಹಿಡಿಯಲು ಪೆÇಲೀಸರು ಸಿದ್ಧರಾಗಿ ಇಲ್ಲದಿದಲ್ಲಿ ಬಜರಂಗದಳದವರು ತಲವಾರು ಹಿಡಿಯುವ ದಿನ ಬೇಗ ಬರಬಹುದು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆಯಾಗಿದ್ದು ಇಲ್ಲಿ ಹಿಂದುತ್ವದ ವಿರುದ್ದ ತೊಡೆತಟ್ಟಿ ತಾಂಟಲು ಬಂದರೆ ನಮ್ಮವರೂ ತಾಂಟಲು ಸಿದ್ಧರಿದ್ದಾರೆ. ಕೊರಗಜ್ಜ ದೈವದ ಶಕ್ತಿ ಇವರಿಗೆ ಅರಿವಿಲ್ಲ, ಶೀಘ್ರದಲ್ಲೇ ದುಷ್ಕøತ್ಯದ ಪರಿಣಾಮ ದೈವ ತೋರಿಸಲಿದೆ ಎಂದರು.
ಭಜರಂಗದಳ ಸಂಚಾಲಕ ಗುರು ಉಳ್ಳಾಲಬೈಲು ಸ್ವಾಗತಿಸಿ ಪ್ರಸ್ತಾವನೆಗೈದರು. ಅರ್ಜುನ್ ಮಾಡೂರು ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ಬಿಜಗುರಿ ವಂದಿಸಿದರು.