Site icon Ullalavani

ಹಿಂದೂ ಸಂಘಟನೆ ಗಳಿಗೆ ತಾಕತ್ತು ಇದ್ದರೆ ಕೋಟ ಶ್ರೀನಿವಾಸ ಪೂಜಾರಿ ಮನೆ ಎದುರು ಪ್ರತಿಭಟನೆ ಮಾಡಲಿ

UN network s

ತೊಕ್ಕೊಟ್ಟು: ವಿಹಿಂಪ ಬಜರಂಗದಳಕ್ಕೆ ತಾಕತ್ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನೆ ಎದುರುಗಡೆ ಪ್ರತಿಭಟನೆ ನಡೆಸಲಿ ಎಂದು ಇಂಟಕ್ ಮುಖಂಡ ದಿನಕರ್ ಶೆಟ್ಟಿ ತಿಳಿಸಿದ್ದಾರೆ.


ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ದುಷ್ಕೃತ್ಯ ಖಂಡಿಸಿ ನಡೆದ
ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು‌.

ಉಳ್ಳಾಲ ಕೊಣಾಜೆಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕೃತ್ಯ ನಡೆಯುತ್ತಿದೆ.
ಕೇಂದ್ರ ಮತ್ತು ರಾಜ್ಯದ ಗೃಹ ಇಲಾಖೆ ಬಿಜೆಪಿ ಕೈಯಲ್ಲಿದ್ದರೂ , ಅವರ ಅಂಗಸಂಸ್ಥೆಗಳಿಂದಲೇ ನಡೆಯುತ್ತಿರುವ ಪ್ರತಿಭಟನೆ ನಾಚಿಕೆಗೇಡು ತರುತ್ತಿದೆ ಎಂದು ಅವರು ತಿಳಿಸಿದರು.

Exit mobile version