Site icon Ullalavani

ಸೋಮೇಶ್ವರ ಪುರಸಭೆಯಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಡಿಜಿಟಲ್ ವ್ಯವಹಾರದ ತರಬೇತಿ

UN networks
ಸೋಮೇಶ್ವರ
: ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಸ್ವಾವಲಂಬಿ ಬದುಕು ನಡೆಸಲು 241 ಬೀದಿಬದಿ  ವ್ಯಾಪಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 121 ಮಂದಿಯನ್ನು ಗುರುತಿಸಿ, 96 ಮಂದಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಸಾಲ ಸೌಲಭ್ಯವನ್ನು ನೀಡಲಾಗಿದೆ ಎಂದು ಸೋಮೇಶ್ವರ ಪುರಸಭೆ ಮುಖ್ಯಾ„ಕಾರಿ ವಾಣಿ ಆಳ್ವ ತಿಳಿಸಿದರು.

ಅವರು ಸೋಮೇಶ್ವರ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು, ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಸೋಮೇಶ್ವರ ಪುರಸಭೆ , ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ‘ಮೈ ಭೀ ಡಿಜಿಟಲ್’ ನಾನು ಕೂಡ ಡಿಜಿಟಲ್  `ಡಿಜಿಟಲ್ ವ್ಯವಹಾರದ ತರಬೇತಿ ` ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಮಾತನಾಡಿ, ಬ್ಯಾಂಕಿನವರು ಮನಸ್ಸು ಮಾಡಿದಲ್ಲಿ ಸಾಲ ಸಿಗುತ್ತದೆ. 12 ತಿಂಗಳಲ್ಲಿ ಸಾಲ ವಾಪಸ್ಸು ಕಟ್ಟಬೇಕು.ಸಾಲ ಮರುಪಾವತಿ ಹವ್ಯಾಸ ಬೆಳೆಸುವುದು ಅತೀ ಅವಶ್ಯಕ. ಈ ಮೂಲಕ ಒಂದೇ ವರ್ಷದ ಅವ„ಯಲ್ಲಿ ಬ್ಯಾಂಕ್ ರೆಕಾರ್ಡ್ ಸರಿ ಮಾಡಬಹುದು.
ಸ್ವನಿ„ ಸಾಲಮನ್ನಾ ಆಗುವ ಸಾಲವಲ್ಲ. ಹಾಗೆ ಅನಿಸಿ ಕುಳಿತಲ್ಲಿ ಬ್ಯಾಂಕ್ ರೆಕಾರ್ಡ್‍ನಲ್ಲಿ ದಾಖಲಾಗಿ ಭವಿಷ್ಯದಲ್ಲಿ ಸಾಲ ಸಿಗದ ಸ್ಥಿತಿ ಎದುರಾಗಬಹುದು
ರೂ.10,000 ಸಾಲ ಪಡೆದವರು 11. 30 % ಬಡ್ಡಿ ಹೊಂದಿದ್ದು, 887 ಮಾಸಿಕ ಕಂತು ಬರುವುದು. ಸಾಲದ ಮೊತ್ತವನ್ನು  ಸರಿಯಾಗಿ ಕಟ್ಟಿದಲ್ಲಿ 7% ಬಡ್ಡಿಯನ್ನು ಸರಕಾರ ಖಾತೆಗೆ ವಾಪಸ್ಸು ಮಾಡುವುದು. ರೂ. 25 ಗಿಂತ ಹೆಚ್ಚಿನ ಹಣವನ್ನು ,  ಬಿಲ್ ಗ್ರಾಹಕರಿಂದ  ನೇರ  ಅಕೌಂಟಿಗೆ ಡಿಜಿಟಲ್ ಪೇಮೆಂಟ್ ಮಾಡಿದಲ್ಲಿ ತಿಂಗಳಿಗೆ ರೂ. 100 ರಂತೆ ವರ್ಷಕ್ಕೆ ರೂ.1200 ಹಣ ಪಡೆಯತಕ್ಕದ್ದು.  ಡಿಜಿಟಲ್ ಪಾವತಿಯಿಂದ ಸಾಕಷ್ಟು ಲಾಭಗಳು ಇವೆ ಎಂದರು.
ಈ ಸಂದರ್ಭ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸಲಾದ ಕ್ಯು ಆರ್ ಕೋಡ್ ಗೆ ಪೆನ್ನಿ ಡ್ರಾಪ್ ರೂ.1 ನ್ನು ಹಾಕುವ  ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭ ಜಿ.ಪಂ ಅಭಿಯಾನ ವ್ಯವಸ್ಥಾಪಕ ವಿಶ್ವನಾಥ್ ರಾವ್, ಬ್ಯಾಂಕ್ ಆಫ್ ಬರೋಡಾದ  ತೊಕ್ಕೊಟ್ಟು ಶಾಖಾ ಪ್ರಬಂಧಕ ಸಂದೇಶ್ ಶೆಟ್ಟಿ, ಕರ್ನಾಟಕ ಬ್ಯಾಂಕ್ ತೊಕ್ಕೊಟ್ಟು ಪ್ರಬಂಧಕ ರಮನಾಥ ಶೆಣೈ, ಕೆನರಾ ಬ್ಯಾಂಕ್ ಕೊಲ್ಯ ಶಾಖೆಯ ಪ್ರಬಂಧಕಿ ಮಿಂಚುಷಾ, ಆರ್ಥಿಕ ಸಾಕ್ಷರತೆಯ ಸಮಾಲೋಚಕ ಲತೇಶ್, ರಾಜ್, ತಿಲಕ್ ಉಪಸ್ಥಿತರಿದ್ದರು.
ಸೋಮೇಶ್ವರ ಗ್ರಾಮ ಪಂಚಾಯತ್ ಸಿಬಂದಿ ರೂಪಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version