Site icon Ullalavani

ಯೆನೆಪೋಯ ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ

UN networks

ದೇರಳಕಟ್ಟೆ: ಸ್ವಾಮಿ ವಿವೇಕಾನಂದರು ಯುವಕರ ಪಾಲಿನ ಹೆಮ್ಮೆಯ ಮತ್ತು ಸ್ಪೂರ್ತಿಯ ಚಿಲುಮೆ ಅವರ ಸಂದೇಶಗಳೂ ಎಂದೆಂದಿಗು ಪ್ರಸ್ತುತ ಎಂದು ಯೇನೆಪೆÇಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಮೊಹಮ್ಮದ್ ಗುಲ್ಜಾರ್ ಅಹ್ಮದ್ ಅಭಿಪ್ರಾಯಪಟ್ಟರು.


ಯೇನೆಪೆÇಯ ಫಾರ್ಮಸಿ ಕಾಲೇಜು ಮತ್ತು  ಸಂಶೋಧನಾ ಕೇಂದ್ರ, ದೇರಳಕಟ್ಟೆ ಮತ್ತು ರಾಷ್ಟ್ರೀಯ ಸಾಮಾಜಿಕ ಸೇವಾ ಘಟಕ, ಮಂಗಳೂರು ಇದರ ಆಶ್ರಯದಲ್ಲಿ ವಿವೇಕಾನಂದರ ಜನ್ಮದಿನೋತ್ಸವ “ರಾಷ್ಟ್ರೀಯ ಯುವ ದಿನ”ದ ಅಂಗವಾಗಿ ಕಾಲೇಜು ಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯುವ ಸಂಸತ್ತು ಸ್ಪರ್ಧೆಯಲ್ಲಿ ಶಿಕ್ಷಣ, ಯುವ ವ್ಯವಹಾರಗಳು, ಆರೋಗ್ಯ, ಅರ್ಥಶಾಸ್ತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಗಳ ಮೇಲೆ ಬಿ.ಫಾರ್ಮ ಮತ್ತು ಡಿ.ಫಾರ್ಮ ವಿದ್ಯಾರ್ಥಿಗಳು ಚರ್ಚಿಸಿದರು. ಮೊದಲು ತಂಡಗಳು ತಮ್ಮ ಅಭಿಪ್ರಾಯಗಳನ್ನು ದಿನದ ಸ್ಪೀಕರ್ ಶೆಮ್ಜಾದ್ ಮತ್ತು ಡೈಸಿ  ಡಿಸೋಜ ಅವರ ಮುಂದೆ ವಿನಿಮಯ ಮಾಡಿದರು, ಅನಂತರ ಇತರ ವಿಷಯಗಳ ಕುರಿತು ಚರ್ಚಿಸಲು ತಂಡಗಳಿಗೆ ಅವಕಾಶ ನೀಡಲಾುತು. ಅಂತಿಮವಾಗಿ ಪ್ರಶ್ನೋತ್ತರ ಅ„ವೇಶನದಲ್ಲಿ ತಂಡಗಳಿಗೆ ಪ್ರೇಕ್ಷಕರು ಪ್ರಶ್ನೆಗಳನ್ನು ಕೇಳಿದರು.
ವಿದ್ಯಾರ್ಥಿಗಳಾದ ಮಿಸ್ಬ, ಶಮ ಮರಿಯಮ್ ವಿದ್ಯಾರ್ಥಿ ದಿನದ ಮಹತ್ವವನ್ನು ವಿವರಿಸಿದರು. ಮುಸ್ಕಾನ್ ಅಸ್ಲಂ ವಂದಿಸಿದರು

Exit mobile version