Site icon Ullalavani

ಕೋವಿಡ್ ಲಸಿಕೆ ಭಯ ಬೇಡ : ಡಾ| ಶಾಂತಾರಾಮ ಶೆಟ್ಟಿ ನಿಟ್ಟೆ ವಿವಿ, ಕ್ಷೇಮ ಮುಖ್ಯಸ್ಥರಿಗೆ ಕೋವಿಡ್ ಲಸಿಕೆ

UN networks
ಉಳ್ಳಾಲ :  ಸರಕಾರದ ಯೋಜನೆಯಂತೆ ಕೊರೊನಾ ವಾರಿಯರ್ಸ್‍ಗೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ  ಕೊರೊನಾಕ್ಕೆ ಲಸಿಕೆ ಹಾಕಿಸುವ ಕಾರ್ಯ ನಡೆಯುತ್ತಿದ್ದು, ಲಸಿಕೆಯ ಕುರಿತು ಯಾರಿಗೂ ಭಯದ ಅಗತ್ಯವಿಲ್ಲ ಎಂದು ಎಂದು ಸಹ ಕುಲಾ„ಪತಿ ಡಾ| ಶಾಂತರಾಮ ಶೆಟ್ಟಿ ತಿಳಿಸಿದರು.


   ಕರ್ನಾಟಕ ಸರಕಾರದಿಂದ ಬಿಡುಗಡೆ ಮಾಡಲಾದ ಕೋವಿಡ್ ಆ್ಯಪ್‍ನಲ್ಲಿ ದಾಖಲಿಸಿರುವ ಕೊರೊನಾ ವಾರಿಯರ್ಸ್‍ಗೆ ಸರಕಾರದ ಯೋಜನೆಯಂತೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ  ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯದಂತೆ ಗುರುವಾರ ಕೋವಿಡ್ ಲಸಿಕೆ ಹಾಕಿಸಿದ ಬಳಿಕ ಅವರ ಮಾತನಾಡಿದರು.
 ಗುರುವಾರ ನಿಟ್ಟೆ ವಿಶ್ವವಿದ್ಯಾನಿಲಯದ  ಸಹ ಕುಲಾ„ಪತಿ ಆಡಳಿತ ವಿಶಾಲ್ ಹೆಗ್ಡೆ ಸೇರಿದಂತೆ ಕುಲಪತಿ ಸತೀಶ್ ಕುಮಾರ್ ಭಂಡಾರಿ, ಸಹಕುಲಪತಿ ಎಂ. ಎಸ್. ಮೂಡಿತ್ತಾಯ, ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ಪಠ್ಯಕ್ರಮ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ| ಹರ್ಷಾ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಪಿ.ಎಸ್. ಪ್ರಕಾಶ್, ಶೈಕ್ಷಣಿಕ ವೈಸ್ ಡೀನ್ ಡಾ| ಅಮೃತ್ ಮಿರಾಜ್‍ಕರ್, ಆಡಳಿತ ವಿಭಾಗದ ವೈಸ್ ಡೀನ್  ಡಾ| ಜೆ.ಪಿ ಶೆಟ್ಟಿ, ನಿಟ್ಟೆ ವಿವಿ ಆಡಳಿತ ವಿಭಾಗದ ಮುಖ್ಯಸ್ಥರು, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ತಜ್ಞ ವೈದ್ಯರುಗಳು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು.  

Exit mobile version