Site icon Ullalavani

ಕುಂಪಲದಲ್ಲೊಂದು ‘ ಚೆಲುವಿನ ಚಿತ್ತಾರ’

UN networks

ಉಳ್ಳಾಲ : ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿ ಪ್ರೇಮದ ನಾಟಕವಾಡಿ ಬೈಕಿನಲ್ಲಿ ಸುತ್ತಾಡಿಸುತ್ತಿದ್ದ ಯುವಕನನ್ನು ಹಿಡಿದು ಬಾಲಕಿ ಹೆತ್ತವರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಯುವಕನನ್ನು ಒಪ್ಪಿಸಿದ ಘಟನೆ ಇಂದು ನಡೆದಿದೆ. ಯುವಕ ಹದಿಹರೆಯದವನಾಗಿದ್ದು ಘಟನೆ ಚೆಲುವಿನ ಚಿತ್ತಾರ ಚಲನಚಿತ್ರವನ್ನು ಹೋಲುವಂತಿದೆ.

ಎಂಟನೇ ತರಗತಿ ವಿದ್ಯಾರ್ಥಿನಿ ಹಾಗು 25 ರ ಹರೆಯದ ಯುವಕ ನಿಗೆ ಹಲವು ದಿನಗಳಿಂದ ಲವ್ ಆಗಿತ್ತು. ಇಬ್ಬರೂ ಮನೆಮಂದಿಯನ್ನು ತಪ್ಪಿಸಿ ಗುಪ್ ಚುಪ್ ಆಗಿ ಸುತ್ತಾಡುವುದನ್ನು ಮಾಡುತ್ತಿದ್ದರು. ಇಂದು ಇಬ್ಬರು ಬೈಕಿನಲ್ಲಿ ಸುತ್ತಾಡುವುದನ್ನು ಗಮನಿಸಿ ದ ಬಾಲಕಿ ಪೋಷಕರು, ಹಿಂದೂ ಸಂಘಟಕರ ಗಮನಕ್ಕೆ ತಂದಿದ್ದಾರೆ. ಯುವಕ ಕೆಲಸ ಇಲ್ಲದವನಾಗಿದ್ದು, ಕೆಟ್ಟ ಚಟುವಟಿಕೆ ಹೊಂದಿ ಬೈಕಿನಲ್ಲಿ ಸುತ್ತಾಡುವುದನ್ನೇ ಹವ್ಯಾಸವಾಗಿಸಿಕೊಂಡಿದ್ದನು. ಇದರಿಂದ ಸಂಘಟಕರು ಯುವಕನ ಮೇಲೆ ಕೆಂಗಣ್ಣು ಹಾಯಿಸಿ ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಬಿಟ್ಟುಬಿಟ್ಟಿದ್ದಾರೆ.

Exit mobile version