Site icon Ullalavani

ಅಕ್ರಮ ಜಾನುವಾರ ಸಾಗಾಟ ಆರೋಪ: ಟಿಂಪೋ ಪೊಲೀಶ್ ವಶಕ್ಕೆ

ಮುಡಿಪು: ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಟೆಂಪೋ ಅಡ್ಡಹಾಕಿದ ಘಟನೆ ಮುಡಿಪು ಸಮೀಪ‌ ನಡೆದಿದೆ.

ಕೋಟೆಕಾರು ಡೈರಿಯಿಂದ, ಬಾಕ್ರಬೈಲು ಡೈರಿಗೆ ಆರು ಹಸುಗಳು, ಒಂದು ಕರುಕೊಂಡೊಯ್ಯಲಾಗುತ್ತಿದ್ದ ಲಾರಿಯನ್ನು ಸಂಘಟನೆಯ ಕಾರ್ಯಕರ್ತರು ಅಡ್ಡ ಹಾಕಿದ್ದಾರೆ. ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿ ಟೆಂಪೋ ವಶಪಡಿಸಿಕೊಂಡಿದ್ದಾರೆ‌

ವೈದ್ಯರ ಅನುಮತಿ ಪತ್ರ ಪಡೆದು ಸಾಗಾಟವನ್ನು ನಡೆಲಾಗಿದೆ ಎಂದು ತಿಳಿದು ಬಂದಿದ್ದು ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version