ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರ ವ್ಯಾವಹಾರಿಕ ಕ್ಷೇತ್ರವಾಗಿ ಮಾರ್ಪಾಡಾಗಿದ್ದು, ಪ್ರತಿಷ್ಠೆಗಾಗಿ ಅನುಕರಣೆಯ ಸಂಶೋಧನೆಗಳಿಂದ ವಾಸ್ತವ ಅರಿಯದೆ ಕ್ಷೇತ್ರದಲ್ಲಿನ ಉತ್ಸಾಹ ಕುಗ್ಗಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪದ್ಮಭೂಷನ ಪುರಸ್ಕøತ ಪ್ರೊ.ಬಿ.ಎಂ .ಹೆಗ್ಡೆ ಹೇಳಿದ್ದಾರೆ.
ಅವರು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಪ್ರೊ.ಡಾ. ಎನ್ ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಸಮಿತಿ ಆಶ್ರಯದಲ್ಲಿ ವಿಂಶತಿ ಭವನದಲ್ಲಿ ಆಯೋಜಿಸಿದ್ದ ` `ಆರೋಗ್ಯ ಎಂದರೇನು’ ಕುರಿತ ದತ್ತಿ ಉಪನ್ಯಾಸವನ್ನು ನೆರವೇರಿಸಿ ಮಾತನಾಡಿದರು.
ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಸ್ಥಾಪಕ ಡೀನ್ ಪ್ರೊ.ಡಾ.ಯನ್ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿ.ವಿ.ಯ ಉಪಕುಲಪತಿ ಪ್ರೊ.ಡಾ.ಎಸ್.ರಮಾನಂದ ಶೆಟ್ಟಿ , ಕುಲಸಚಿವರಾದ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಭಾಗವಹಿಸಿದ್ದರು.
ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಪ್ರೊ.ಡಾ.ಯು.ಯಸ್. ಕೃಷ್ಣ ನಾಯಕ್ ಸ್ವಾಗತಿಸಿದರು. ಅಮರಶ್ರೀ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ಯನ್.ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಸಮಿತಿಯ ಅಧ್ಯಕ್ಷ ಪ್ರೊ.ಡಾ.ಗೋಪ ಕುಮಾರ್.ಆರ್ ವಂದಿಸಿದರು.