Site icon Ullalavani

ಬಿಎಸ್ಸಿ ಪದವೀಧರೆ ಪಾವೂರು ಗ್ರಾಮದ ಸದಸ್ಯೆ!

UN networks

ಪಾವೂರು :ಡೇರೆಯಲ್ಲಿ ಬದುಕು ನಡೆಸಿ ತಾಯಿ ಶ್ರಮದಿಂದ ಬಿಎಸ್ಸಿ ಪದವೀಧರೆಯಾಗಿ ವಿದ್ಯಾಭ್ಯಾಸ ಪೂರೈಸಿದ ಯುವತಿ ಇದೀಗ ಗ್ರಾಮದ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ಪಾವೂರು ಪಂಚಾಯತಿಯ ಎರಡನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಮತ ಅವರು ಆಯ್ಕೆಯಾಗಿದ್ದಾರೆ.

ಬಿಎಸ್ಸಿ ಪದವೀಧರೆಯಾಗಿರುವ ಮಮತ ಅವರ ಕುಟುಂಬ ಡೇರೆಯಲ್ಲಿ ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದರು. ದಾನಿಗಳ ಸಹಕಾರದಿಂದ ಬೆಂಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, 2020ರಲ್ಲಿ ಮೆಡಿಕಲ್ ವಿಭಾಗದಲ್ಲಿ
ಮೆಡಿಕಲ್ ಲಾಬೋರೆಟರಿ ಟೆಕ್ನಾಲೋಜಿ
(ಬಿಎಸ್ಸಿ) ಪದವಿಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು.

ಕಷ್ಟ ಎಂದು ಬರುವವರಿಗೆ ನನ್ನಿಂದಾಗುವ ಸಹಾಯವನ್ನು ಮಾಡಬೇಕು. ಜನರ ಕಷ್ಟಗಳಿಗೆ ಮೊದಲಿನ ಆದ್ಯತೆಯನ್ನು ನೀಡುತ್ತೇನೆ.ಕಷ್ಟದ ದಾರಿ ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಶಯದೊಂದಿಗೆ ರಾಜಕೀಯ ಪ್ರವೇಶಿಸಿದ್ದೇನೆ. ಕಲಿತ ವಿಷಯದಲ್ಲಿಯೇ ಕೆಲಸ ಮಾಡುವ ಯೋಚನೆಯೂ ಇದೇ ಮುಂದೆ ಹೇಗೆ ನಡೆಯುತ್ತದೆ ಎಂದು ಕಾದುನೋಡಬೇಕಿದೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾದ ಮಮತ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

Exit mobile version