Site icon Ullalavani

ನನ್ನ ಮತ ನನ್ನ ಹಕ್ಕು: ಉಳ್ಳಾಲ ನ್ಯೂಸ್ ಲೈವ್ ಅಪ್ಡೇಟ್.

ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಹರೇಕಳ ರಾಜಗುಡ್ಡೆ ಶಾಲೆಯಲ್ಲಿ  ತಮ್ಮ ಹಕ್ಕನ್ನು ಚಲಾಯಿಸಿದರು.  ಹುಟ್ಟೂರಿನ ಬೂತ್ ಗಳಲ್ಲಿ  ಪಕ್ಷದ ಕಾರ್ಯಕರ್ತರ ಜತೆಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹುರಿದುಂಬಿಸಿದರು. ಈ ವೇಳೆ ಮಾತನಾಡಿದ ಅವರು  ಕೇಂದ್ರ ಹಾಗೂ ರಾಜ್ಯ ಸರಕಾರಗಳ  ಪಂಚಾಯಿತಿವರೆಗಿನ ಅಭಿವೃದ್ಧಿ ಕಾರ್ಯಗಳನ್ನು  ನೋಡಿರುವ ಜನತೆ  ತಮ್ಮ  ಉತ್ತಮ ಭವಿಷ್ಯಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದರು

ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ  ಸಂತೋಷ್ ರೈ ಬೋಳಿಯಾರ್ ತಮ್ಮ ಮತದಾನದ ಹಕ್ಕನ್ನು  ಪಾನೇಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಲಾಯಿಸಿದರು. ಬಳಿಕ ಬೋಳಿಯಾರು ಬೂತ್ ನಲ್ಲಿ ಕುಳಿತು  ಪಕ್ಷದ ಬೆಂಬಲಿತ ಸದಸ್ಯರಿಗೆ ಉತ್ಸಾಹ ತುಂಬಿದರು.  ಬಳಿಕ ಮಾತನಾಡಿದ ಅವರು  ಮಂಗಳೂರು ಕ್ಷೇತ್ರದ 12 ಗ್ರಾ.ಪಂಗಳು ಈ ಬಾರಿ ಪಕ್ಷದ ಬೆಂಬಲಿತ ಸದಸ್ಯರೇ ಆಯ್ಕೆಯಾಗಲಿದ್ದು, ಆಡಳಿತವನ್ನು ನಡೆಸಲಿದ್ದಾರೆ.   ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕರ ತಾರತಮ್ಯವನ್ನು ಗಮನಿಸಿರುವ  ಜನತೆ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಿದ್ದಾರೆ ಎಂದರು. 

ಮಂಗಳೂರು ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಯು.ಟಿ ಖಾದರ್ ಬೋಳಿಯಾರಿನ ರಂತಡ್ಕ ಜಿ.ಪಂ ಹಿರಿಯ  ಪ್ರಾಥಮಿಕ  ಶಾಲೆಯಲ್ಲಿ ಮತ ಚಲಾಯಿಸಿದರು. ಪತ್ನಿ ಜತೆಗೆ ಆಗಮಿಸಿದ ಶಾಸಕರು  ಮತದಾರರ ಜತೆಗೆ ಸರತಿ ಸಾಲಿನಲ್ಲಿ ನಿಂತೇ ಮತದಾನ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು , ಕೇಂದ್ರ ಹಾಗೂ ರಾಜ್ಯ ಸರಕಾರದ ದುರಾಡಳಿತಕ್ಕೆ ಬೇಸತ್ತಿರುವ ಜನತೆ ಉತ್ತಮ ಫಲಿತಾಂಶವನ್ನು ನೀಡಲಿದ್ದಾರೆ.  ರಾಜ್ಯದಾದ್ಯಂತ  ಕಾಂಗ್ರೆಸ್ ಬೆಂಬಲಿತರೇ ಮೇಲುಗೈ ಸಾಧಿಸಲಿದ್ದಾರೆ ಎಂದರು. 

ಕುತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ಬೆಳಗ್ಗಿನ ಹೊತ್ತಿನಲ್ಲಿ  ವಿದ್ಯುತ್  ಇಲ್ಲದೇ ಅಧಿಕಾರಿಗಳು ಪರದಾಡಬೇಕಾಯಿತು.  ಮೊಬೈಲ್ ಟಾಚ್ ್  ಮತ್ತು ಕ್ಯಾಂಡಲ್ ಹಿಡಿದುಕೊಂಡು  ವೋಟರ್ ಲಿಸ್ಟನ್ನು  ನೋಡಬೇಕಾದ ಅನಿವಾರ್ಯತೆ ಎದುರಾಯಿತು. ಈ ಕುರಿತು ಗಮನಹರಿಸಿದ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ , ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದಿದ್ದು, ಕೂಡಲೇ ಇಲಾಖೆ ಸ್ಪಂಧಿಸಿ ವಿದ್ಯುತ್ ನೀಡಿದೆ. 


 ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ಮತದಾನ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಜಮಾಯಿಸಿದ ಹಿನ್ನೆಲೆಯಲ್ಲಿ   ಚುನಾವಣಾ ಆಯೋಗದ ಕಾನೂನಿನಂತೆ  ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು
.  

Exit mobile version