UN networks
ತೊಕ್ಕೊಟ್ಟು: ವೀರ ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ತೊಕ್ಕೊಟ್ಟಿನಲ್ಲಿ ಜಾಗ ನೀಡಬೇಕೆಂಬ ಆಗ್ರಹದ ಮಧ್ಯೆ ಇದೀಗ ಬ್ಯಾರಿ ಭವನ ನಿರ್ಮಾಣಕ್ಕೆ ತೊಕ್ಕೊಟ್ಟಿನಲ್ಲಿ ಜಾಗ ನಿಗದಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಅಸಮಾಧಾನ ಭುಗಿಲೆದ್ದಿದೆ. ಸರಕಾರದ ಈ ನಡೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಅಸಮಾಧಾನ ವ್ಯಕ್ತಪಡಿಸಿದ್ದು ದ.ಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದೆ.
ದೇಶದಲ್ಲಿ ಪೋರ್ಚುಗೀಸರ ಜತೆ ಹೋರಾಟಕ್ಕೆ ಕಿಚ್ಚು ಹತ್ತಿಸಿದ ದೇಶದ ಪ್ರಥಮ ಮಹಿಳೆ ವೀರರಾಣಿ ಅಬ್ಬಕ್ಕ ಹೆಸರಿನಲ್ಲಿ ರಾಣಿ ಅಬ್ಬಕ್ಕ ಭವನ ನಿಮಾ೯ಣ
ಮಾಡಲು ಸರಕಾರಕ್ಕೆ ಮನವಿಯನ್ನು ಈ ಹಿಂದೆಯೇ ಅನೇಕ ಭಾರಿ ಮನವಿಯನ್ನು ‘ಸಲ್ಲಿಸಿತ್ತು ಹಾಗೂ ಉಳ್ಳಾಲ ಮತ್ತು ರಾಣಿ ಅಬ್ಬಕ್ಕ ಅಭಿಮಾನಿಗಳು ತೊಕ್ಕೊಟು ಬಸ್ಸು ನಿಲ್ದಾಣದ ಹಿಂಭಾಗದ ಜಾಗವನ್ನು ಗುರುತಿಸಿ ಅಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಲಾಗಿತ್ತು.
ಆದರೆ ಆ ಜಮೀನನ್ನು ರಾಣಿ ಅಬ್ಬಕ್ಕ ಭವನ ನಿಮಾ೯ಣಕ್ಕೆ ನೀಡದೆ, ಬ್ಯಾರಿ ಭವನಕ್ಕೆ ನೀಡಬೇಕೆಂದು ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಓಲೈಕೆ ಮಾಡಿರುವುದು ಖಂಡನೀಯ ಮತ್ತು ಇದು ಜಿಲ್ಲೆಯ ಜನತೆಗೆ ಸರಕಾರ ಮಾಡಿರುವ ಅನ್ಯಾಯವಾಗಿರುತ್ತದೆ ಎಂದು ಹಿಂದೂ ಮಹಾಸಭಾ ಆರೋಪಿಸಿದೆ.
ಈ ಕೂಡಲೇ ಈ ಜಮೀನನ್ನು ರಾಣಿ ಅಬ್ಬಕ್ಕ ಭವನದ ನಿಮಾ೯ಣಕ್ಕೆ ಮೀಸಲಿರಿಸಿ, ಬ್ಯಾರಿ ಭವನಕ್ಕೆ ಬೇರೆ ಸ್ಥಳವನ್ನು ನೀಡಿ, ಜಿಲ್ಲೆಯ ಜನತೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಅಖಿಲ ಭಾರತ ಹಿಂದೂ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ನೀಡಿದೆ.
ಈ ಕೂಡಲೆ ಈ ನಿರ್ಧಾರವನ್ನು ಬದಲಾಯಿಸಬೇಕಾಗಿ ಮತ್ತು ಯಾವುದೇ ಕಾರಣಕ್ಕೂ ಶೀಘ್ರ ಶಿಲಾನ್ಯಾಸಕೈಗೊಳ್ಳುವುದನ್ನುಕೈ ಬಿಟ್ಟು, ಜಿಲ್ಲಾಧಿಕಾರಿಗಳು ಜಿಲ್ಲೆಯ ವಾಸ್ತವಿಕತೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಆದೇಶವನ್ನು ತಡೆಹಿಡಿಯಲು ಸಂಘಟನೆ ಒತ್ತಾಯಿಸಿದೆ.
ಮನವಿ ಸಲ್ಲಿಕೆ ಸಂದಭ೯ದಲ್ಲಿ ದ.ಕ ಜಿಲ್ಲಾಧ್ಯಕ್ಷ ಲೋಕೇಶ್ ಉಳ್ಳಾಲ , ಜಿಲ್ಲಾ ಉಪಾಧ್ಯಕ್ಷೆ ಅನುರಾಧ , ಮಂಗಳೂರು ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷ ಕೆ.ಪಿ. ಉದಯ ಕುಮಾರ್ ಹೆಗಡೆ, ಹಿಂದೂ ಯುವಕ ಸಭಾ ದ .ಕ ಜಿಲ್ಲಾಧ್ಯಕ್ಷ ಚಿದ೦ಬರ ರಾವ್ , ಹಿಂದೂ ಶ್ರಮಿಕ್ ಸಭಾ ದ.ಕ ಜಿಲ್ಲಾ ಕಾಯ೯ದಶಿ೯ ಪ್ರಕಾಶ್ ಭಟ್ , ಪವನ್ ,ಯತೀಶ್ ಮುಂತಾದವರು ಉಪಸ್ಥಿತರಿದ್ದರು.