ಉಳ್ಳಾಲ: ಯೆನೆಪೆÇೀಯಾ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಸಹಯೋಗದೊಂದಿಗೆ ಯೆನೆಪೆÇೀಯಾ ಫೌಂಡೇಶನ್ (ಯೆನೆಪೆÇೀಯಾ ಮೊಯ್ದೀನ್ ಕುಂಞÂ ಸ್ಮರಣಾರ್ಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ (ನಿ.)ನ ಒಂದು ಘಟಕ] ವತಿಯಿಂದ ಪ್ರತಿ ವರ್ಷ ನೀಡಲ್ಪಡುವ ಎಎಸ್‍ಎಸ್‍ಎಲ್‍ಸಿ , ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಪುರಸ್ಕಾರಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ.
2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ / ಪಿಯುಸಿ ಮತ್ತು ಪದವಿ ಕೋರ್ಸುಗಳಲ್ಲಿ ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳಿಂದ ಶೈಕ್ಷಣಿಕ ಶ್ರೇಷ್ಠತೆಯ ಪ್ರಶಸ್ತಿ (ಅಕಾಡೆಮಿಕ್‍ಎಕ್ಸಲೆನ್ಸ್ ಅವಾಡ್ರ್ಸ್) – 2020 ಗೆ ಅರ್ಜಿ ಆಹ್ವಾನಿಸಲಾಗಿದೆ. ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಪಡೆಯಬಹುದು. ಎಸ್‍ಎಸ್‍ಎಲ್‍ಸಿ/ ಪಿಯುಸಿಯಲ್ಲಿ ಶೇ.90 (ಸಿಜಿಪಿಎ 9.5) ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದವರು, ಪದವಿ ಕೋರ್ಸುಳಾದ ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿಬಿಎಂ ಮತ್ತು ಬಿಎಗಳಲ್ಲಿ ಶೇ.75 (ಸಿಜಿಪಿಎ 7.9) ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದವರು ಮತ್ತು ಬಿ.ಎಡ್, ಅಫ್ಜಲ್-ಉಲೆಮಾ ಪರೀಕ್ಷೆಗಳಲ್ಲಿ ಶೇ. 70 (ಸಿಜಿಪಿಎ 7.4) ಅಂಕಗಳನ್ನು ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆಆಸಕ್ತ ಅಭ್ಯರ್ಥಿಗಳು yenepoya.edu.in –aea.yenepoya.in ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಆನ್‍ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ಸರಿಯಾಗಿ ಭರ್ತಿ ಮಾಡಿದ ಆನ್ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು 2021ರ ಜ. 20 ಕೊನೆಯ ದಿನಾಂಕವಾಗಿರುತ್ತದೆ ಎಂದು ಯೆನೆಪೋಯ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.