UN networks
ಕೊಣಾಜೆ: ಕೊಣಾಜೆ ಬೊಳ್ಳೆಕುಮೇರು ನಿವಾಸಿ ಲಕ್ಷ್ಮಣ ಪೂಜಾರಿ ಅವರ ಪುತ್ರ ಧರಣೇಶ್ ಕೊಣಾಜೆ (39) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಇದ್ದರೂ ಛಲವಾದಿಯಾಗಿ ಯಶಸ್ವಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು.
ಕೊಣಾಜೆ – ಸ್ಟೇಟ್ ಬ್ಯಾಂಕ್ ನಡುವೆ ಚಲಿಸುವ ಸುಷ್ಮಿತಾ ಬಸ್ಸಿನಲ್ಲಿ ಬೆಳಿಗ್ಗೆ ತೆರಳುವ ದಿನಚರಿ ಹೊಂದಿದ್ದ ಇವರು ಬಸ್ ನಿರ್ವಾಹಕ ನಾರಾಯಣ ಅವರ ಜತೆಗೆ ಸೇರಿಕೊಂಡು ಸದ್ದಿಲ್ಲದೆ ಅಶಕ್ತರಿಗೂ ಧನ ಸಂಗ್ರಹಿಸಿ ಸಹಾಯ ಮಾಡಿದವರು.