UN networks
ಕೊಣಾಜೆ: ಖ್ಯಾತ ಜ್ಯೋತಿಷಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಸುಟ್ಟ ದಿ. ರಾಮ ಪಂಡಿತ ಅವರ ಪುತ್ರ, ಖ್ಯಾತ ಆಯುರ್ವೇದ ತಜ್ಞ ಡಾ. ಎಸ್. ಎಸ್. ರಾಮ್ ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ಕೈರಂಗಳ ದುಗ್ಗಜ್ಜರಕಟ್ಟೆಯಲ್ಲಿ ನಾಲ್ಕು ದಶಕಗಳಿಂದ ಕ್ಲಿನಿಕ್ ತೆರೆದು ತನ್ನ ಕೈಗುಣದಿಂದಲೇ ಅತ್ಯುತ್ತಮ ವೈದ್ಯರೆಂದು ಜನಾನುರಾಗಿಯಾಗಿದ್ದರು. ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಅಧ್ಯಕ್ಷರಾಗಿ, ಗೋಪಾಲಕೃಷ್ಣ ದೇವಸ್ಥಾನ ಹಾಗೂ ಭಜನ ಮಂದಿರದ ಗೌರವ ಸಲಹೆಗಾರರಾಗಿ ಕೈರಂಗಳ ಶ್ರೀ ಕೃಷ್ಣ ಗೇಮ್ಸ್ ಕ್ಲಬ್‌ನಲ್ಲೂ ಸಕ್ರಿಯರಾಗಿದ್ದರು. ನಡಿನ ಬಹಳಷ್ಟು ದೈವ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯಾಗಿದ್ದರು. ನರಿಂಗಾನ ಮರಕಟ್ಟ ಶ್ರೀ ಮಲರಾಯ ದೈವಸ್ಥಾನದಲ್ಲಿ ಕುಟುಂಬದಿAದ ಬಂದಿದ್ದ ದೈವೀ ಸೇವೆಯನ್ನು ನಿರಂತರ ಮಾಡುತ್ತಾ ಬಂದಿದ್ದರು. ನಾಟಕ ಕಲಾವಿದರಾಗಿ ಬಯ್ಯಮಲ್ಲಿಗೆ, ಜೇನಿನಗೂಡು, ಕರ‍್ದಬ್ಬ ತನ್ನಿಮಾನಿಗ, ಸೂರ್ಯಕಾಂತಿ, ಗಂಗಾರಾಮ್ ಮೊದಲಾದ ನಾಟಕದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದರು. ಯಕ್ಷಗಾನಗಳಲ್ಲೂ ಸಣ್ಣಪುಟ್ಟ ವೇಷ ಧರಿಸಿದ್ದರು. ಆಯುರ್ವೇದದಲ್ಲಿ ಜನಪ್ರಿಯರಾಗಿದ್ದ ಅವರ ಸೇವೆಗೆ ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ರೋಗಿಗಳು ಚಿಕಿತ್ಸೆಗೆಗಾಗಿ ಆಗಮಿಸುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.