Site icon Ullalavani

ಮಂಗಳೂರು ಕ್ಷೇತ್ರ 19 ಗ್ರಾ.ಪಂ.ಗಳಲ್ಲೂ ಬಿಜೆಪಿ ಆಡಳಿತ : ಚಂದ್ರಹಾಸ್ ಪಂಡಿತ್ ಹೌಸ್

ಉಳ್ಳಾಲ: ಮಂಗಳೂರು ವಿಧಾನಸಬಾ ಕ್ಷೇತ್ರದ 19 ಗ್ರಾಮ ಪಂಚಾಯತ್‍ಗಳ 332 ಸ್ಥಾನಗಳಲ್ಲಿ 278 ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 180ಕ್ಕೂ ಹೆಚ್ಚು ಅಭ್ಯರ್ಥಿಗಳು ಜಯಗಳಿಸಲಿದ್ದು, 12ರಿಂದ 15 ಪಂಚಾಯತ್‍ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಬರಲಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಪಂಡಿತ್‍ಹೌಸ್ ತಿಳಿಸಿದರು.


ತೊಕ್ಕೊಟ್ಟು ಕಾಪಿಕಾಡ್‍ನ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಈ ಬಾರಿ ನಮಗೆ ಯಾವುದೇ ಆತಂಕವಿಲ್ಲ. ಗ್ರಾಮ ಮಟ್ಟದಲ್ಲಿ ಹೆಚ್ಚಿನ ಅನುದಾನವನ್ನು ನೀಡಿದ್ದೇವೆ. ಕೋವಿಡ್ 19 ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅಲ್ಪ ಸಂಖ್ಯಾತರು ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆಯಲ್ಲಿದ್ದಾರೆ. ಪಕ್ಷದಿಂದ ಆಭ್ಯರ್ಥಿಗಳಾಗಲು ಹೆಚ್ಚು ಮಂದಿ ಮುಂದೆ ಬಂದಿದ್ದಾರೆ ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‍ನಲ್ಲಿ ಬಿಜೆಪಿ ಮೇಲಗೈ ಸಾ„ಸುವುದು ಸಿದ್ಧ ಎಂದ ಅವರು ಕಳೆದ ಅ„ಕಾರ ಅವ„ಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ 6 ಗ್ರಾಮ ಪಂಚಾಯತ್‍ನಲ್ಲಿ ಆಡಳಿತ ನಡೆಸುತ್ತಿದ್ದು, ಎರಡು ಪಂಚಾಯತ್‍ಗಳಲ್ಲಿ ಸಮ್ಮಿಶ್ರವಾಗಿ ಆಡಳಿತ ನಡೆಸಿತ್ತು. ಈ ಬಾರಿಯ ಚುನಾವಣೆಯ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಭಿವೃದ್ಧಿ ಯೋಜನೆಯನ್ನು ಗ್ರಾಮಮಟ್ಟದಲ್ಲಿ ಕಾರ್ಯಗತಗೊಳಿಸಲು ಪೂರಕವಾಗಲಿದ್ದು, ಬಿಜೆಪಿಯ 180ಕ್ಕೂ ಹೆಚ್ಚು ಅಭ್ಯರ್ಥಿಗಳು ಜಯಗಳಿಸಲಿದ್ದು 12ರಿಂದ 15ರವರೆಗೆ ಪಂಚಾಯತ್‍ಗಳು ಬಿಜೆಪಿ ಆಡಳಿತ ನಡೆಸಲಿದೆ ಎಂದರು.
ಏಳು ಮಂದಿ ಅವಿರೋಧ ಆಯ್ಕೆ : ಜನರು ಕಾಂಗ್ರೆಸ್‍ನಿಂದ ಭ್ರಮನಿರಸನಗೊಂಡಿದ್ದಾರೆ. ಇಂದು ಕಾಂಗ್ರೆಸ್‍ಗೆ ಗ್ರಾಮ ಮಟ್ಟದಲ್ಲಿ ಚುನಾವಣೆಗೆ ಸ್ಪರ್„ಸಲು ಸೂಕ್ತ ಅಭ್ಯರ್ಥಿಗಳು ಸಿಗದಿರುವ ಕಾಂಗ್ರೆಸ್ ದಿವಾಳಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದಕ್ಕೆ ಪೂರಕವೆಂಬಂತೆ ನಾಮಪತ್ರ ಸಲ್ಲಿಕೆಯಾಗುತ್ತಲೆ ಬಿಜೆಪಿಗೆ ಏಳು ಗ್ರಾಮ ಪಂಚಾಯತ್‍ಗಳಲ್ಲಿ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಸಿಪಿಐಎಂ ಸೇರಿದಂತೆ ಸ್ಥಳೀಯ ಪಕ್ಷಗಳು ನೆಲಕಚ್ಚಿದೆ. ಎಸ್‍ಡಿಪಿಐಯಂತಹ ಪಕ್ಷಗಳು ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದರು.
ದಿ. ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಮಂಜನಾಡಿಯಲ್ಲಿ ಬಿಜೆಪಿಯ ಸಕ್ರೀಯ ಕಾರ್ಯಕರ್ತ ಮತ್ತು ಹಜ್ ಸಮಿತಿ ಸದಸ್ಯ ಧರ್ಮಗುರು ಹನೀಫ್ ನಿಜಾಮಿ ಆವರು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದನ್ನು ಸಹಿಸಲಾರದೆ ಅವರ ಮೇಲೆ ನಡೆದ ರಾಜಕೀಯ ಪ್ರೇರಿತ ಹಲ್ಲೆ ವಿರೋಧ ಪಕ್ಷದ ಹತಾಶೆ ಮನೋಭಾವನೆಯನ್ನು ತೋರಿಸುತ್ತಿದ್ದು ಹಲ್ಲೆ ಘಟನೆ ಖಂಡನೀಯ, ಮುಂದಿನ ದಿನಗಳಲ್ಲಿ ಕಾರ್ಯಕರ್ತರು ದೃತಿಗೆಡದೆ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದ ಅವರು ನಾವು ಈ ಬಾರಿ ಅತಿಇ ಹೆಚ್ಚು ಅಲ್ಪ ಸಂಖ್ಯಾತರನ್ನು ಕಣಕ್ಕಿಳಿಸಿದ್ದೇವೆ. 278 ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿದ್ದರೆ, ಉಳಿದ ಕಡೆ ಪಕ್ಷೇತರರ ರೂಪದಲ್ಲಿ ನಮ್ಮ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಡಳಿತ ಸಂದರ್ಭದಲ್ಲಿ ಅವರು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಡಿÀಹಾಂಧೀಜಿ ಕಂಡ ರಾಮರಾಜ್ಯ ಕನಸನ್ನು ನನಸು ಮಾಡುವ ಕಾರ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದು, 15ನೇ ಹಣಕಾಸಿನಲ್ಲಿ ಮಾಡಿದ ವಾಗ್ದಾನದಂತೆ ಯೋಜನೆಯನ್ನು ಬಿಡುಗಡೆ ಮಾಡಿದೆ. ಜೆಜೆಎಂ ಯೋಜನೆಯಡಿ ಗ್ರಾಮಮಟ್ಟಕ್ಕೆ ಯೋಜನೆ ಮುಟ್ಟಿದೆ ಎಂದ ಅವರು ಜಿಲ್ಲೆಯ ಏಳು ಮಂಡಲದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲು, ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಕರ್ಕೇರ, ಕ್ಷೇತ್ರ ಪ್ರ. ಕಾರ್ಯದರ್ಶಿಗಳಾದ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ಕ್ಷೇತ್ರ ಉಪಾಧ್ಯಕ್ಷ ಯಶವಂತ ಅಮೀನ್, ಮುಖಂಡ ಮೋಹನ್‍ದಾಸ್ ಶೆಟ್ಟಿ ಕಿನ್ಯ ಉಪಸ್ಥಿತರಿದ್ದರು.

Exit mobile version