Site icon Ullalavani

ತಲಪಾಡಿ ಟೋಲ್‌ಗೇಟ್ ಸಮಸ್ಯೆ ಪರಿಹಾರಕ್ಕೆ ಇಂಟೆಕ್
ವತಿಯಿಂದ ಡಿ. 12 ಕ್ಕೆ ಪ್ರತಿಭಟನೆ

UN networks

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲಪಾಡಿ ಟೋಲ್‌ಗೇಟ್ ಆರಂಭದಿಂದಲೂ ಸಮಸ್ಯೆಯ
ತಾಣವಾಗಿದ್ದು ಸಮಸ್ಯೆಯ ಪರಿಹಾರಕ್ಕೆ ವಿವಿಧ ಸಂಘಟನೆಗಳಿಂದ ಅನೇಕ‌ ಬಾರಿ ಪ್ರತಿಭಟನೆ
ನಡೆಸಿದ್ದು ಟೋಲ್‌ಗೇಟ್ ಗುತ್ತಿಗೆದಾರರು ಆ ಬಗ್ಗೆ ನಿರ್ಲಕ್ಷಿಸುತ್ತಿದ್ದು ಆ ಕಾರಣದಿಂದ ಕಾರ್ಮಿಕ ಸಂಘಟನೆ ಇಂಟೆಕ್ ನಿಂದ ಡಿ. 12ರಂದು ಪ್ರತಿಭಟನೆ ನಡೆಯಲಿದೆ ಎಂದು ಯೂತ್ ಇಂಟೆಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೇಳಿದರು.


ತೊಕ್ಕೊಟ್ಟಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋರ್ಟ್
ಆದೇಶದ ಪ್ರಕಾರ ಪ್ರತಿಯೊಂದು ಟೋಲ್‌ಗೇಟ್ ಸ್ಥಳದಿಂದ 3 ಕಿ.ಮೀ. ತನಕ ಸ್ಥಳೀಯವಾಗಿ ವಾಸಿಸುವ
ಚೀಟಿ ಪರಿಶೀಲಿಸುವುದರೊಂದಿಗೆ
ಜನರ ವಾಹನಕ್ಕೆ ಉಚಿತವಾಗಿ ಪಾಸ್
ಕಳುಹಿಸತಕ್ಕದ್ದು. ಆದರೆ ತಲಪಾಡಿ ಟೋಲ್‌ಗೇಟ್ ನಲ್ಲಿ ತಲಪಾಡಿ ಪಂಚಾಯಿತಿಗೆ ಉಚಿತವಾಗಿ ಸೇವೆ
ನೀಡುತ್ತಿದ್ದು ಈ ಸೇವೆಯನ್ನು 3 ಕಿ.ಮೀ. ಒಳಗಿನವರಿಗೆ ನೀಡತಕ್ಕದ್ದು ಎಂದು‌ ಹೇಳಿದರು.
ಟೋಲ್ ಗೇಟ್ ಗುತ್ತಿಗೆದಾರರು ವಾಹನ ಚಾಲಕರಿಂದ 24ತಾಸಿನೊಳಗೆ ದುಪ್ಪಟ್ಟು ಹಣ
ಪಡೆಯುತ್ತಿದ್ದು, ಯಾವುದೇ ವ್ಯಕ್ತಿ ಕಾರು ಬಳಸಿ ಹೋಗುವುದು ಹಾಗೂ ಹಿಂದೆ ಬರುವಾಗ ತಲಾ 40ರೂ. ಗಳಂತೆ
80ರೂ. ನೀಡಬೇಕಾಗುತ್ತದೆ. ಆದರೆ
ಈಗ ಈ ಟೋಲ್‌ಗೇಟ್ ಸಮಸ್ಯೆಯಿಂದ ಕರ್ನಾಟಕದ ಯಾವುದೇ ಬಸ್
ಟೋಲ್‌ಗೇಟ್‌ಗಿಂತ ಮುಂದೆ ಹೋಗುತ್ತಿಲ್ಲ. ಇದರಿಂದ ಜನರು ನಡೆದುಕೊಂಡು ಹೋಗಬೇಕಾಗಿದ್ದು
ಇಂತಹ‌ ವ್ಯವಸ್ಥೆಯಿಂದ ಹಿರಿಯ ನಾಗರೀಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದರು.
‌ ಸಾರ್ವಜನಿಕ ಹಿತಾದೃಷ್ಟಿಯಿಂದ ಬಸ್ ಗಳಿಗೆ ಟೋಲ್
ಫ್ರೀ ಮಾಡಿ, ಮೇಲಿನ ತಲಪಾಡಿ ನಿಲ್ದಾಣಕ್ಕೆ ಹೋಗುವ ವ್ಯವಸ್ಥೆ ಈ ಹಿಂದೆ ಮಾಡಿದ ಹಾಗೆ ಮಾಡತಕ್ಕದ್ದು. ಅಲ್ಲದೆ ಫಾಸ್ಟ್ ಟ್ಯಾಗ್ ಇಲ್ಲದ
ವಾಹನಗಳು ಸುಮಾರು ಒಂದೂವರೆ ಕಿಲೋಮೀಟರ್ ಸಾಲಲ್ಲಿ ನಿಂತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ
ತೊಂದರೆಯಾಗುತ್ತಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದ ವಾಹನ ಬೇರೆ ಲೈನ್ ನಲ್ಲಿ ಹೋದರೆ ದುಪ್ಪಟ್ಟು ಶುಲ್ಕ
ಪಡೆದುಕೊಳ್ಳುತ್ತಾರೆ. ಅಲ್ಲದೆ ಹೆದ್ದಾರಿ ಕಾಮಗಾರಿ ಸಂಪೂರ್ಣ ಆಗದೆ ಅನೇಕ ಅಪಘಾತಗಳು ಸಂಭವಿಸಿವೆ ಎಂದು ಹೇಳಿದರು.
ಈಗಾಗಲೇ ಒಂದು ತಿಂಗಳಲ್ಲಿ ಹಲವು ಜೀವ ಹಾನಿಯಾಗಿದ್ದು, ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ತುಂಬಾ ಅನ್ಯಾಯವಾಗುತ್ತಿದೆ. ಅನ್ಯಾಯದ
ಗೂಡಾಗಿರುವ ತಲಪಾಡಿ ಟೋಲ್‌ಗೇಟ್ ನಿಂದ ಆಗುವ ಸಮಸ್ಯೆಯ ಪರಿಹಾರಕ್ಕಾಗಿ ಇಂಟೆಕ್ ದಕ್ಷಿಣ ಕನ್ನಡ ಜಿಲ್ಲಾ
ಘಟಕ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಈಗಾಗಲೇ ಮನವಿ ನೀಡಿದ್ದು ಒಂದು ವೇಳೆ 10ದಿನದ ಒಳಗೆ ಸಮಸ್ಯೆ
ಬಗೆಹರಿಸದೇ ಇದ್ದಲ್ಲಿ ಡಿ.‌12 ರಂದು ಬೆಳಗ್ಗೆ 11.30ಕ್ಕೆ ತಲಪಾಡಿ ಟೋಲ್‌ಗೇಟ್
ಮುಂಭಾಗದಲ್ಲಿ ಸಮಸ್ತ ಊರಿನ ಸಂಘ ಸಂಸ್ಥೆಗಳು ಮತ್ತು ಜನರ ನೆರವಿನೊಂದಿಗೆ ಹೋರಾಟ ಸಮಿತಿಯ ಮೂಲಕ
ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಮಂಗಳೂರು ವಿಧಾನ ಸಭಾ ಕ್ಷೇತ್ರ ಇಂಟೆಕ್ ಅಧ್ಯಕ್ಷ
ಹರೀಶ್ ರಾವ್, ಮಂಗಳೂರು ವಿಧಾನ ಸಭಾ ಕ್ಷೇತ್ರ ಯೂತ್ ಇಂಟೆಕ್ ಅಧ್ಯಕ್ಷ ಸಿದ್ಧಿಕ್ ಹಸನ್, ಮಂಗಳೂರು ದಕ್ಷಿಣ ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟೆಕ್ ಅಧ್ಯಕ್ಷ ಪುನೀತ್ ಶೆಟ್ಟಿ,
ಮಂಗಳೂರು ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟೆಕ್
ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ, ಮಂಗಳೂರು
ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟೆಕ್ ಉಪಾಧ್ಯಕ್ಷ
ಸಿರಾಜುದ್ದಿನ್, ಬ್ಲಾಕ್ ಕಾಂಗ್ರೆಸ್ ಜೊತೆ ಕಾರ್ಯದರ್ಶಿ ಮನ್ಸೂರ್ ಹಾಗೂ ದಕ್ಷಿಣ ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟೆಕ್ ಉಪಾಧ್ಯಕ್ಷ
ಮುನೀಶ್ವರನ್ ಉಪಸ್ಥಿತರಿದ್ದರು.

Exit mobile version