Site icon Ullalavani

ದೋಣಿ ಪ್ರಕರಣ: ಇಬ್ಬರ ಮೃತ ದೇಹ ಪತ್ತೆ

UN netowrks

ಉಳ್ಳಾಲ: ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಮುಳುಗುತಜ್ಞರು ಮೇಲಕ್ಕೆತ್ತಿ ದ್ದಾರೆ.

ಬೊಕ್ಕಪಟ್ನ ನಿವಾಸಿಗಳಾದ
ಪಾಂಡುರಂಗ ಸುವರ್ಣ, ಪ್ರೀತಂ ಮೃತದೇಹ ಪತ್ತೆಯಾಗಿದೆ. ಇನ್ನು ನಾಪತ್ತೆಯಾದ ನಾಲ್ಕು ಜನರಿಗಾಗಿ ತೀವ್ರ ಶೋಧ ಕಾರ್ಯ ನಡಯುತ್ತಿದೆ.

ಸೋಮವಾರ ನಸುಕಿನ ಜಾವ 5 ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿಯಿದ್ದ ಬೋಟ್ ತೆರಳಿತ್ತು. ಬೆಳಿಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಇಂದು ಮುಂಜಾನೆ ವಾಪಸ್ಸು ಧಕ್ಕೆ ತಲುಪುವುದಿತ್ತು. ಆದರೆ ಮೀನಿನ ಭಾರ ಅಧಿಕವಾಗಿದ್ದು, ಭಾರೀ ಗಾಳಿ ಬೀಸಿದಾಗ ಒಮ್ಮಿಂದೊಮ್ಮೆಲೇ ದೋಣಿ ಮಗುಚಿ ಬಿದ್ದು 14 ಮಂದಿಯನ್ನು ರಕ್ಷಿಸಲಾಗಿದೆ.

Exit mobile version