Site icon Ullalavani

ಡಿ.22 ಹಾಗೂ 27ರಂದು ಗ್ರಾಮಪಂಚಾಯತಿ ಚುನಾವಣೆ

UN networks

ಮಂಗಳೂರು: ಗ್ರಾಮ ಪಂಚಾಯತಿ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದ್ದು ಡಿ.22ಕ್ಕೆ ಮೊದಲ ಹಂತದ ಚುನಾವಣೆ ಹಾಗೂ ಡಿ.27ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ ರಾಜ್ಯದಲ್ಲಿ ನಡೆಯಲಿದೆ.

ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.
ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯ ತನಕ ಮನದಾನ ನಡೆಯಲಿದೆ. ರಾಜ್ಯದಲ್ಲಿ 5,762 ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿದ್ದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ.ಡಿ 30 ರಂದು ಮತ ಎಣಿಕೆ ನಡೆಯಲಿದೆ. ನೀತಿಸಂಹಿತೆಯು ಇಂದಿನಿಂದ ಆರಂಭವಾಗಿ ಡಿ.31ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಚುನಾವಣಾ ಆಯೋಗದ ಆಯುಕ್ತ ಡಾ. ಬಸವರಾಜು ತಿಳಿಸಿದ್ದಾರೆ.

Exit mobile version