ಮಂಗಳೂರು: ಲಷ್ಕರ್ ಇ ತೊಯ್ಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ರೀತಿಯಲ್ಲಿ ರಸ್ತೆಬದಿ ಗೋಡೆ ಮೇಲೆ ಗೀಚುಬರಹ ಕದ್ರಿಯಲ್ಲಿ ಶುಕ್ರವಾರ ಕಂಡುಬಂದು ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಅದೇ ಬರಹಕ್ಕೆ ಸಡ್ಡು ಹೊಡೆಯುವ ಮತ್ತೊಂದು ಎಡಿಟೆಡ್ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಗರದ ಕದ್ರಿಯ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ಮೇಲೆ ಯಾರೋ ಕಿಡಿಗೇಡಿಗಳು ಉಗ್ರ ಸಂಘಟನೆಗಳು ಪರ ಗೋಡೆ ಬರಹವು ಶುಕ್ರವಾರ ಬೆಳಕಿಗೆ ಬಂದಿತ್ತು.ಹ್ಯಾಶ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆದು ಇಂಗ್ಲಿಷ್ ನಲ್ಲಿ Do not force us to invite Lashkare-Toiba and Taliban to deal with Sanghis and Manvedis’ ಎಂದು ಬರೆದ ಬೆನ್ನಲ್ಲೇ ಇದೀಗ ಅದನ್ನೇ ಹೋಲುವ ಮತ್ತೊಂದು ಎಡಿಟೆಡ್ ಬರಹ ಹರಿದಾಡುತ್ತಿದ್ದು ‘ invite ಯಾರನ್ನು ಬೇಕಾದ್ರೂ ಮಾಡಿ ನಾವೇನು ಅಂಗನವಾಡಿ ಸಜ್ಜಿಗೆ ತಿನ್ನುತ್ತಾ ಕುಳಿತುಕೊಳ್ಳೇವಾ? ಇದು modi fied India # Indian army’ ಎಂದು ಬರೆದು before and ofter , ಉತ್ತರ ಇದು ಎಂಬ ಚಿತ್ರ ಸಮೇತದ ಸಂದೇಶ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.