Site icon Ullalavani

ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಉಳ್ಳಾಲ: ನೀರಿನ ಟ್ಯಾಂಕ್ ಪರಿಶೀಲನೆಗೆ ತೆರಳಿದ ಕಾರ್ಮಿಕ ಬಹುಮಹಡಿ ಕಟ್ಟಡದ ಮೇಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ಯಾರೀಸ್ ಜಂಕ್ಷನ್ ನಲ್ಲಿ ಇಂದು ತಡರಾತ್ರಿ ವೇಳೆ ಸಂಭವಿಸಿದೆ.

ಚೆಂಬುಗುಡ್ಡೆ ನಿವಾಸಿ ಮುತ್ತು(45) ಸಾವನ್ನಪ್ಪಿದವರು. ಇನ್ ಲ್ಯಾಂಡ್ ಕಟ್ಟಡದಲ್ಲಿ ದುರ್ಘಟನೆ ಸಂಭವಿಸಿದೆ. ನೀರಿನ ಟ್ಯಾಂಕ್ ಪರಿಶೀಲನೆಗೆಂದು ತೆರಳಿದಾಗ ಕಾಲು ಜಾರಿ ಕೆಳಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version