Site icon Ullalavani

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳ ಅಪಹರಣವಾಗಿಲ್ಲ: ಠಾಣಾಧಿಕಾರಿ

UN netowrks

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಚಾಕಲೇಟ್ ನೀಡಿ ಮಕ್ಕಳ ಅಪಹರಣಾಗುತ್ತಿದೆ ಅನ್ನುವ ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿದ್ದು, ಈ ಕುರಿತು ಮಾಹಿತಿ ನೀಡಿರುವ ಉಳ್ಳಾಲ ಠಾಣಾಧಿಕಾರಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಮಕ್ಕಳ ಅಪಹರಣವಾಗಿಲ್ಲ, ಸುಳ್ಳು ಮಾಹಿತಿಯ ಸಂದೇಶ ವೈರಲ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ವರ್ಷದ ಹಿಂದೆ ಇದೇ ರೀತಿಯ ವೈರಲ್ ಸಂದೇಶ ಹೊರಜಿಲ್ಲೆಯೊಂದರಲ್ಲಿ ಹರಿದಾಡಿದ್ದು, ಊರಿನ ಜನ ತಪ್ಪಾಗಿ ಭಾವಿಸಿ ವಿಹಾರಕ್ಕೆ ಬಂದ ಟೆಕ್ಕಿಗಳು ಮಕ್ಕಳಿಗೆ ಚಾಕಲೇಟ್ ನೀಡುವ ಸಂದರ್ಭ ಅವರಿಗೆ ಹಲ್ಲೆ ನಡೆಸಿ ಹೈದರಾಬಾದ್ ಮೂಲದ ಟೆಕ್ಕಿ ಓರ್ವನನ್ನು ಹತ್ಯೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಜಾಗೃತೆ ವಹಿಸಿರುವ ಠಾಣಾಧಿಕಾರಿ ಸಂದೀಪ್ ವಾಟ್ಸ್ಯಾಪ್ ಸಂದೇಶದ ಸುಳ್ಳು ಮಾಹಿತಿ. ಮಕ್ಕಳ ಅಪಹರಣದ ಕುರಿತ ಯಾವುದೇ ಪ್ರಕರಣಗಳು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

Exit mobile version