Site icon Ullalavani

ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿಯಾದರೂಭಟ್ ವಿರುದ್ಧ ಪ್ರಕರಣ ದಾಖಲಿಸುವುದು ಖಚಿತ : ರಿಯಾಝ್ ಫರಂಗಿಪೇಟೆ

UN networks

ಉಳ್ಳಾಲ: ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿಯಾದರೂ ಪಾಕಿಸ್ತಾನ ಏಜೆಂಟರಾಗಿರುವ ಕಲ್ಲಡ್ಕ ಭಟ್ ವಿರುದ್ಧ ಎಫ್ ಐಆರ್ ದಾಖಲಿಸುವುದು ಖಚಿತ. ದಾವೆಗೆ ಎಷ್ಟು ಖರ್ಚಾದರೂ ಉಳ್ಳಾಲದ ಜನ ಸಿದ್ಧರಿದ್ದಾರೆ ಎಂದು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು.

ಅವರು ಉಳ್ಳಾಲ ಪ್ರದೇಶವನ್ನು ಪಾಕಿಸ್ತಾನ ಎಂದು ಹೇಳಿ ಅವಮಾನಗೊಳಿಸಿದ ದೇಶವಿರೋಧಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಕಲಿ ಜಾತ್ಯಾತೀತ ಮುಖವಾಡದವರ ಪೆÇ್ರೀತ್ಸಾಹ ದಿಂದ ಕಲ್ಲಡ್ಕ ಭಟ್ ನಿರಂತರವಾಗಿ ಅಶಾಂತಿ ಸೃಷ್ಟಿಸುವ ಮಾತುಗಳನ್ನಾಡುತ್ತಿದ್ದಾರೆ. ಉಳ್ಳಾಲ ಪಾಕಿಸ್ತಾನ ಎಂದ ಭಟ್ ವಿರುದ್ಧವೇ ಸ್ವಕ್ಷೇತ್ರದ ಶಾಸಕರಿಗೆ ಪೆÇಲೀಸ್ ಇಲಾಖೆಯಲ್ಲಿ ದೂರು ನೀಡಲು ಅಸಾಧ್ಯವಾಗಿದೆ. ಜಾತ್ಯಾತೀತ ಮುಖವಾಡ ತೋರಿಸಿಕೊಂಡು ಕೋಮುವಾದವನ್ನು ಶಾಸಕರು ವಿರೋಧಿಸುತ್ತಿಲ್ಲ. ಭಟ್ ವಿರುದ್ಧ ಪ್ರಕರಣ ದಾಖಲಿಸದ ಪೆÇಲೀಸರು ಐಪಿಸಿ ಸೆಕ್ಷನ್ ಅನ್ನು ಮತ್ತೆ ಅಧ್ಯಯನ ಮಾಡುವ ಅನಿವಾರ್ಯತೆ ಇದೆ.
ಬಾಬರಿ ಮಸೀದಿ, ಎನ್ ಆರ್ ಸಿ ಸಿಎಎ ಪರವಾಗಿ ಮಾತನಾಡಿದರೆ ದೇಶದ್ರೋಹ ಪ್ರಕರಣ ದಾಖಲಾಗುತ್ತದೆ. ಆದರೆ ಪಾಕಿಸ್ತಾನದ ಏಜೆಂಟ್ ಆಗಿರುವ ಕಲ್ಲಡ್ಕ ಭಟ್‍ಗೆ ಮತ್ತು ಪೆÇಲೀಸ್ ಇಲಾಖೆಗೆ ಸಂಬಂಧ ಇದ್ದಂತೆ ಕಾಣುತ್ತಿದೆ. ಸಂಘಪರಿವಾರದ ಗರಡಿಯಲ್ಲಿ ಬೆಳೆದ ಪ್ರಧಾನಿಯೇ ಪಾಕಿಸ್ತಾನದ ಬಿರಿಯಾನಿ ತಿಂದವರು. ಅವರಿಗೆ ಬುದ್ಧಿ ಹೇಳುವ ನೈತಿಕತೆ ಕಲ್ಲಡ್ಕ ಭಟ್ ಗಿಲ್ಲ. ಉಳ್ಳಾಲದಲ್ಲಿ ಪಂಚವಾರ್ಷಿಕವಾಗಿ ಆಚರಿಸುವ ದರ್ಗಾ ಉರೂಸ್ ಕಾರ್ಯಕ್ರಮದಲ್ಲಿ ಪ್ರತಿ ಧರ್ಮದವರು ಭಾಗವಹಿಸಿ ಸೌಹಾರ್ದತೆಗೆ ಸಾಕ್ಷಿಯಾಗುತ್ತಾರೆ. ಪ್ರತಿ ಧರ್ಮದವರನ್ನು ವೇದಿಕೆಯಲ್ಲಿ ಕೂರಿಸಿ ಗೌರವ ನೀಡಲಾಗುತ್ತಿದೆ. ಅಂತಹ ಸಾಮರಸ್ಯವಿರುವ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಎಸ್ ಡಿಪಿಐ ಮನಸ್ಸು ಮಾಡಿದರೆ ಉಳ್ಳಾಲದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ ,ದಲಿತ ನನ್ನು ಕೂಡಾ ಶಾಸಕನಾಗಿ ಮಾಡಿ ತೋರಿಸುತ್ತದೆ ಎಂದು ಕಲ್ಲಡ್ಕ ಮಾತಿಗೆ ಪ್ರತಿಸವಾಲು ಹಾಕಿದರು. ಪೊಲೀಸರು ದ್ವಿಮುಖ ಧೋರಣೆ ತೋರಿಸದೆ, ಭಟ್ ವಿರುದ್ಧ ಕೂಡಲೇ ಎಫ್ ಐ ಅರ್ ದಾಖಲಿಸಬೇಕು. ದಾಖಲಿಸದೇ ಇದ್ದಲ್ಲಿ ಎಸ್ ಡಿಪಿಐ ಕಾಂಗ್ರೆಸ್ -ಜೆಡಿಎಸ್ ಪಕ್ಷದಂತೆ ಸುಮ್ಮನಿರುವುದಿಲ್ಲ. ಪೊಲೀಸ್ ಠಾಣೆಗೆ ಮುತ್ತಿಗೆಯನ್ನು ಬಿಟ್ಟು ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ ಪ್ರತಿಭಟನೆ ನಡೆಸಿರುವುದು ಪೊಲೀಸರಿಗೆ ಶರಣಾಗತಿಯಲ್ಲ. ಬದಲಾಗಿ ಪ್ರಜಾಪ್ರಭುತ್ವದ ಸೌಂದರ್ಯ ಕಾಪಾಡುವ ಉದ್ದೇಶದೊಂದಿಗೆ ನಡೆಸಿದ್ದೇವೆ. ಎರಡನೇ ಹಂತದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಸನ್ನಿವೇಶ ಕಲ್ಪಿಸಿದಲ್ಲಿ ಠಾಣೆಯೇ ಎದುರುಗಡೆ, ಮಂಗಳೂರು ಕಮೀಷನರ್ ಕಚೇರಿ ಎದುರುಗಡೆಯೂ ಪ್ರತಿಭಟಿಸಲಿದ್ದೇವೆ ಎಂದು ಎಚ್ಚರಿಸಿದರು. ಉಳ್ಳಾಲದಲ್ಲಿ ಶಾಸಕರ ಓಲೈಕೆ ರಾಜಕೀಯದಿಂದ ಸರಕಾರದಲ್ಲಿ ಜಾಗದಲ್ಲಿ ಕಟ್ಟಲಾಗಿದ್ದ ಭಜನಾ ಮಂದಿರ ಮತ್ತು ಮುಸ್ಲಿಂ ಪ್ರಾರ್ಥನಾ ಮಂದಿರದ ಪೈಕಿ, ಮುಸ್ಲಿಂ ಪ್ರಾರ್ಥನಾ ಮಂದಿರವನ್ನು ಮಾತ್ರ ತಹಶೀಲ್ದಾರ್, ಪೊಲೀಸರ ನೇತೃತ್ವದಲ್ಲಿ ಕೆಡವಲಾಗಿತ್ತು.
ಪೋಸ್ಟರ್ , ವಾಟ್ಸ್ಯಾಪ್ ಸಂದೇಶಗಳ ಮೂಲಕ ಪಾಕಿಸ್ತಾನದ ಹೆಸರು ಎತ್ತಿದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಪಾಕಿಸ್ತಾನಕ್ಕೆ ಘೋಷಣೆ ಹಾಕಿದ್ದ ಅಮೂಲ್ಯ ಮತ್ತು ಭಟ್ ಗೆ ವ್ಯತ್ಯಾಸವಿಲ್ಲ. ಮುಸ್ಲಿಂ ಸಮುದಾಯ ರಾಜಕೀಯವಾಗಿ ಸಬಲೀಕರಣಗೊಂಡಿದೆ. ಆರ್ ಎಸ್ ಎಸ್ ಎದುರಿಸುವ ಎಲ್ಲಾ ಕಾರ್ಯಾಚರಣೆಗಳನ್ನು ರಚಿಸಿಯಾಗಿದೆ ಎಂದ ಅವರು ಮುಂದೆಯೂ ಕಲ್ಲಡ್ಕ ಭಟ್ ವಿರುದ್ಧ ಉಳ್ಳಾಲ ಠಾಣೆಂiÀiಲ್ಲಿ ಪ್ರಕರಣ ದಾಖಲಿಸದೇ ಇದ್ದಲ್ಲಿ, ಉಳ್ಳಾಲದ ಪೊಲೀಸ್ ಅಧಿüಕಾರಿಗಳನ್ನು ಎರಡನೇ ಆರೋಪಿಯಾಗಿ ದೂರಿನಲ್ಲಿ ದಾಖಲಿಸಲಾಗುವುದು ಎಂದರು.

ಅತಾವುಲ್ಲ ಜೋಕಟ್ಟೆ ಮಾತನಾಡಿ ಮೊಗವೀರ, ಮುಸಲ್ಮಾನ, ಹಿಂದೂಗಳು ಅನೋನ್ಯವಾಗಿರುವ ಪ್ರದೇಶ ಉಳ್ಳಾಲ. ಅಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನ ಭಟ್ ನಿಂದ ಆಗಿದೆ. ಕ್ರಮಕೈಗೊಳ್ಳಬೇಕಾದ ಪೊಲೀಸರು ಕಲ್ಲಡ್ಕ ಭಟ್ ಗೆ ಒಂದು ಕಾನೂನು , ಬೇರೆಯವರಿಗೆ ಇನ್ನೊಂದು ಕಾನೂನು ಅನ್ನುವ ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡ ಅಬ್ದುಲ್ ಜಲೀಲ್ ಕೃಷ್ಣಾಪುರ ಮಾತನಾಡಿ ಭಟ್ ಓರ್ವ ಜೋಕರ್, ಆ ವ್ಯಕ್ತಿಯನ್ನು ದೊಡ್ಡ ಜನ ಮಾಡುವ ಅವಶ್ಯಕತೆಯಿಲ್ಲ. ಜಿಲ್ಲಾಡಳಿತ ಅವರನ್ನು ಮಾನಸಿಕ ರೋಗಿಗಳ ಸಾಲಿಗೆ ಸೇರಿಸಬೇಕು. ಮಾನಸಿಕ ಅಸ್ವಸ್ಥೆಯನ್ನು ಪ್ರದರ್ಶಿಸಲು ಪೆÇಲೀಸ್ ಇಲಾಖೆ ಅನುಮತಿ ಕೊಡುತ್ತಿದೆ. ಪೊಲೀಸ್ ಇಲಾಖೆಗೆ ಸಂಘಪರಿವಾರದವರ ಮೇಲೆ ಸೌಜನ್ಯ ಯಾಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅವಕಾಶ, ಸ್ವಾತಂತ್ರ್ಯ ಅಧಿಕಾರಿಗಳಿಗೆ ಇವೆ. ಆದರೆ ಅದು ಭಟ್ ಪ್ರಕರಣದಲ್ಲಿ ಪಾಲನೆಯಾಗುತ್ತಿಲ್ಲ. ಪೊಲೀಸರು ಇಲಾಖೆಯ ಗೌರವವನ್ನು ಕಾಪಾಡದೇ ಇದ್ದಲ್ಲಿ ಜನ ಬೀದಿಗೆ ಇಳಿಯಲಿದ್ದಾರೆ ಎಂದರು ಎಚ್ಚರಿಸಿದರು. ಪ್ರತಿಭಟನೆ ಬಳಿಕೆ ಎಸಿಪಿ ರಂಜಿತ್ ಅವರಿಗೆ ಎಸ್ ಡಿಪಿಐ ನಾಯಕರು ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್ ಡಿಪಿಐ ಮುಖಂಡರುಗಳಾದ ಝಾಕಿರ್ ಉಳ್ಳಾಲ್, ಶಹೀದ್ ಕಿನ್ಯಾ, ಸಿದ್ದೀಖ್ ಯು.ಬಿ ಮುಂತಾದವರು ಉಪಸ್ಥಿತರಿದ್ದರು.

ಬಿಗಿ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳೂರು, ಸುರತ್ಕಲ್, ಕಂಕನಾಡಿ, ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಹಾಗೂ ಕೆಎಸ್ ಆರ್ ಪಿ ನೇತೃತ್ವದ ತಂಡ ತೊಕ್ಕೊಟ್ಟುವಿನಿಂದ ಉಳ್ಳಾಲದ ಮಾಸ್ತಿಕಟ್ಟೆವರೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಎಸಿಪಿ ರಂಜಿತ್, ವಿವಿಧ ಠಾಣಾಧಿಕಾರಿಗಳಾದ ಬೆಳ್ಳಿಯಪ್ಪ, ಅಶೋಕ್ ಹಾಗೂ ಉಳ್ಳಾಲದ ಸಂದೀಪ್ ನೇತೃತ್ವದ ಬಂದೋಬಸ್ತಿನಡಿಯಲ್ಲಿ ಪ್ರತಿಭಟನೆ ನಡೆಯಿತು.

Exit mobile version