Site icon Ullalavani

ಆಶ್ರಮದಿಂದ ನಾಪತ್ತೆಯಾದ ವಿಧವೆ ಮಹಿಳೆ, ಹಳೇ ಪ್ರಿಯಕರನ ಜತೆಗೆ ಪತ್ತೆ

UN networks

ಉಳ್ಳಾಲ: ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟನೆಗಳಿಂದ ಪಜೀರು ಗೋವನಿತಾ ಆಶ್ರಮಕ್ಕೆ ಸೇರಿಸಿದ್ದ ವಿಧವೆ ಮಹಿಳೆ ಮತ್ತೆ ಹಳೇಯ ಪ್ರಿಯಕರನ ಜತೆಗೆ ಉಳ್ಳಾಲದಲ್ಲಿ ಪತ್ತೆಯಾಗಿದ್ದಾಳೆ.
ಅಡ್ಯಾರುಪದವಿನಲ್ಲಿದ್ದ ವಿಧವೆ ಮಹಿಳೆಗೆ ಎರಡು ವರ್ಷಗಳ ಹಿಂದೆ ಉಳ್ಳಾಲದ ಶೌಕತ್ ಎಂಬಾತನ ಜತೆಗೆ ಪ್ರೇಮವಿತ್ತು. ಒಂದೂವರೆ ವರ್ಷದ ಹಿಂದೆ ಜತೆಯಾಗಿ ವಾಮಂಜೂರಿನಲ್ಲಿದ್ದ ಶೌಕತ್ ಮತ್ತು ಮಹಿಳೆಯನ್ನು ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟಕರು ಬೇರೆ ಮಾಡಿಸಿ, ಪಜೀರು ಗೋವನಿತಾಶ್ರಮಕ್ಕೆ ಒಪ್ಪಿಸಿದ್ದರು. ವಿಧವೆ ಮಹಿಳೆ ಆಶ್ರಮದಲ್ಲಿದ್ದು ಮತ್ತೆ ಶೌಕತ್ ಸಂಪರ್ಕದಲ್ಲಿದ್ದಳು. ನ.2 ರಂದು ಮಹಿಳೆ ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಗೋವನಿತಾಶ್ರಮ ಸಮಿತಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೊಣಾಜೆ ಠಾಣಾ ಅಪರಾಧ ವಿಭಾಗದ ಎಸ್. ಐ ಶರಣಪ್ಪ ನೇತೃತ್ವದ ತಂಡ ಮತ್ತೆ ಮಹಿಳೆಯನ್ನು ಶೌಕತ್ ಮನೆಯಲ್ಲೇ ಪತ್ತೆಹಚ್ಚಿದ್ದಾರೆ.


ಇಬ್ಬರು ವಯಸ್ಕರಾಗಿದ್ದು, ಸ್ವ ಇಚ್ಛೆಯಿಂದ ತೆರಳಿರುವುದರಿಂದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.ಶೌಕತ್ ವಿವಾಹಿತನಾಗಿದ್ದು, ಓರ್ವ ಮಗಳಿದ್ದಾಳೆ.

Exit mobile version