Site icon Ullalavani

ದೆಹಲಿಯಲ್ಲಿ ಮುಂದುವರಿದ ಕೊರೋನ ಆರ್ಭಟ

UN networks

ದೆಹಲಿ: ಕೆಂಪು ಕೋಟೆ ದೆಹಲಿಯಲ್ಲಿ ಕೊರೋನ ಅಟ್ಟಹಾಸ ಮತ್ತೊಮ್ಮೆ ಶುರುವಾಗಿದೆ. ಈಗಾಗಲೇ ಕೊರೋನದಿಂದ ಭಾರಿ ಸಾವು ನೋವು ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಆರಂಭವಾಗಿದೆ.

ಕೆಲ ದಿನಗಳ ಹಿಂದೆ ಸೋಂಕಿನ‌ಪ್ರಮಾಣ ಕಡಿಮೆಯಾಗಿದ್ದು ಎರಡು ಬಾರಿ ಪ್ರಕರಣ ಕಡಿಮೆಯಾಗಿ ಇದೀಗ ಹೆಚ್ಚಾಗುತ್ತಿದ್ದಂತೆ ಜನರಿಗೆ ನಡುಕ ಶುರುವಾಗಿದೆ.

ಒಂದೇ ದಿನ 7178 ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಕೊರೊನಾ ಸೋಂಕು ಆರಂಭವಾದಾಗಿನಿಂದ ಒಂದೇ ದಿನ ಇಷ್ಟೊಂದು ಪ್ರಮಾಣದ ಸೋಂಕಿತರು ಪತ್ತೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಿತ್ಯ 6 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದವು. ನವೆಂಬರ್ 4 ರಂದು 6842 ಪ್ರಕರಣಗಳು ಪತ್ತೆಯಾಗಿತ್ತು.ದೆಹಲಿಯಲ್ಲಿ ಈಗ ಒಟ್ಟು 4,23,831 ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. ಶೇ.89ರಷ್ಟು ಚೇತರಿಕೆ ಕಂಡಿದ್ದಾರೆ.

ಚಳಿಗಾಲದಲ್ಲಿ ವಾಯುಗುಣಮಟ್ಟ ಕುಸಿಯಲಿದ್ದು, ಇದು ಕೊರೊನಾ ಸೋಂಕಿತರಿಗೆ ಮತ್ತಷ್ಟು ಅಪಾಯವನ್ನುಂಟು ಮಾಡಲಿದೆ.ಇದರಿಂದ ಉಸಿರಾಟ ಸಮಸ್ಯೆಯೂ ಹೆಚ್ಚಾಗಲಿದೆ.

ದೆಹಲಿ ಭಾರತದ ಕೊರೊನಾ ರಾಜಧಾನಿಯಾಗಲು ಹೊರಟಿದೆ, ಸೋಂಕನ್ನು ಕಡಿಮೆ ಮಾಡಲು ಶೀಘ್ರ ಕಾರ್ಯಪ್ರವೃತ್ತರಾಗಿ ಎಂದು ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ.

Exit mobile version