Site icon Ullalavani

ಶಿರಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ ಬಿಜೆಪಿ: ಬಿ.ವೈ. ವಿಜಯೇಂದ್ರ

ಕುತ್ತಾರು: ಉಪಚುನಾವಣೆ ನಡೆದ ಶಿರಾ ಕ್ಷೇತ್ರದಲ್ಲಿ 25,000 ಮತಗಳ ಅಂತರದಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆಶ್ರಮದ ಮಕ್ಕಳ ಜೊತೆಗೆ ಹುಟ್ಟು ಹಬ್ಬವನ್ನು ಸರಳವಾಗಿ ಮಂಗಳವಾರ ಆಚರಿಸಿ ಮಾತನಾಡಿದರು.

ಜೆ.ಪಿ ನೆಡ್ಡಾ ಅವರ ಸೂಚನೆಯಂತೆ ಮೈಸೂರಿನಿಂದ ಪಕ್ಷ ಸಂಘಟನೆ ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಡಿಯೂರಪ್ಪರ ಮಗನಾಗಿರುವುದಕ್ಕೆ ಹೆಮ್ಮೆ ವಿಷಯ.
ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಪ್ರೀತಿ ವಿಶ್ವಾಸದೊಂದಿಗೆ ಬೆಳೆಯುತ್ತಾ ಇದ್ದೇವೆ.ಕುತ್ತಾರು ಆಶ್ರಮದ ಸಂಘಟಕರು ಅಪೇಕ್ಷೆ ಪಡೆಯದೆ ಸೇವೆಗೆ ಅಡಚಣೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಆಶ್ರಮಕ್ಕೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು.ಹುಟ್ಟುಹಬ್ಬ ಆಚರಿಸುವ ಉದ್ದೇಶವಿರಲಿಲ್ಲ, ಆದರೆ ಕಾರ್ಯಕರ್ತರ ಒತ್ತಾಯಕ್ಕೆ ಸರಳವಾಗಿ ಆಶ್ರಮದ ಮಕ್ಕಳ ಜತೆಗೆ ಆಚರಿಸಿದ್ದೇನೆ ಎಂದರು.

ಈ ಸಂದರ್ಭ ಆಶ್ರಮ ಸಂಘಟಕ ಅನಂತಕೃಷ್ಣ ಭಟ್, ಬಿಜೆಪಿ ಮುಖಂಡರುಗಳಾದ ಕಿಶೋರ್ ಕುಮಾರ್ ಪುತ್ತೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್, ಗೋಪಾಲ್ ಕುತ್ತಾರ್, ರಾಜೀವ್ ಮೈಸೂರು ಉಪಸ್ಥಿತರಿದ್ದರು.

ಆಶ್ರಮದ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ:
ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ದಲ್ಲಿ ಆಶ್ರಮದ ಮಕ್ಕಳ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆ 8.30 ರ ಹೊತ್ತಿಗೆ ಆಗಮಿಸಿದ ಸಂಸದರನ್ನು ಉಳ್ಳಾಲ ವಲಯದ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು. ಮೊದಲಿಗೆ
ಗೋಪೂಜೆ ನೆರವೇರಿಸಿ ನಂತರ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರು ನಂತರ ಮಕ್ಕಳ ಜತೆಗೆ ಹುಟ್ಟುಹಬ್ಬ ಆಚರಿಸಿದರು.



Exit mobile version