Site icon Ullalavani

ಸವಿತಾ ಸಮಾಜ ಉಳ್ಳಾಲ ಅಧ್ಯಕ್ಷರಾಗಿ ರಮೇಶ್ ಕೆ.ಕುತ್ತಾರ್ ಆಯ್ಕೆ

ಉಳ್ಳಾಲ :  ಸವಿತಾ ಸಮಾಜ ಉಳ್ಳಾಲ ಇದರ 2020-21 ನೇ ಸಾಲಿನ ಅಧ್ಯಕ್ಷರಾಗಿ ರಮೇಶ್ ಕೆ. ಕುತ್ತಾರ್ ಇವರು  ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.


ತೊಕ್ಕೊಟ್ಟು ಗಣೇಶಮಂದಿರದಲ್ಲಿ ಇತ್ತೀಚೆಗೆ ನಡೆದ  ವಾರ್ಷಿಕ ಸಭೆ ನಡೆಯಿತು. ಪದಾಧಿಕಾರಿಗಳ ಆಯ್ಕೆಯಲ್ಲಿ  ಗೌರವ ಅಧ್ಯಕ್ಷರಾಗಿ   ಎಸ್. ವಿಶ್ವನಾಥ್ ಭಂಡಾರಿ ಪ್ರಧಾನ ಕಾರ್ಯದರ್ಶಿ ಆಗಿ  ಎ. ಶಶಿಕುಮಾರ್,  ಕೋಶಾಧಿಕಾರಿಯಾಗಿ  ಯತೀಶ್. ಬಿ. ಸಾಲಿಯಾನ್ ಇವರುಗಳನ್ನು ನೇಮಕಮಾಡಲಾಯಿತು.  
ಸಮಾಜದ ಹಿರಿಯರಾದ ಮತ್ತು ಸರಕಾರದ ಕಾರ್ಮಿಕ ಶ್ರಮ ಸಮ್ಮಾನ 2020ರ  ವಿಶೇಷ ಪ್ರಶಸ್ತಿ ಪಡೆದ  ಎಸ್. ವಿಶ್ವನಾಥ್ ಭಂಡಾರಿಯವರನ್ನು ಉಳ್ಳಾಲ ಸವಿತಾ ಸಮಾಜ ಪರವಾಗಿ ಸಮ್ಮಾನಿಸಲಾಯಿತು. 

Exit mobile version